
ನವದೆಹಲಿ,ಆ.೮- ಅಶಿಸ್ತಿನ ನಡವಳಿಕೆ ಹಿನ್ನೆಲೆಯಲ್ಲಿ ಟಿಎಂಸಿ ಸದಸ್ಯ ಡೆರಿಕ್ ಓ ಬ್ರಿಯಾನ್ ಅವರನ್ನು ಈ ಅವಧಿಯ ರಾಜ್ಯಸಭೆಯ ಕಲಾಪದಿಂದ ಸಭಾಪತಿ ಜಗದೀಪ್ ಧನ್ ಕರ್ ಅಮಾನತು ಮಾಡಿದ್ದಾರೆ.
ಸದನದ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸುತ್ತಿರುವ ಡೆರಿಕ್ ಒಬ್ರಿಯಾನ್ ಅವರನ್ನು ಸದನ ಮುಗಿಯುವ ತನಕ ಅಮಾನತು ಮಾಡಲಾಗಿದೆ ಎಂದು ಸಭಾಪತಿ ತಿಳಿಸಿದ್ದಾರೆ.
ಬೆಳಗ್ಗೆ ಸದನ ಆರಂಭವಾದಾಗ ಇಂಡಿಯಾ ಮೈತ್ರಿಕೂಟದ ಸದಸ್ಯರು ಮಣಿಪುರ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿದರು. ಈ ವೇಳೆ ಟಿಎಂಸಿ ಸದಸ್ಯ ಡೆರಿಕ್ ಓಬ್ರಿಯಾನ್ ಅವರು ಪದೇ ಪದೇ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಉಳಿದ ದಿನಗಳಿಗೆ ಕಲಾಪಕ್ಕೆ ಬರದಂತೆ ಅಮಾನತು ಮಾಡಲಾಗಿದೆ.ಸದಸ್ಯ ಡೆರಿಕ್ ಅವರು, ಪದೇ ಪದೇ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆ ನಾಲ್ಕು ಬಾರಿ ಎಚ್ಚರಿಕೆ ನೀಡಲಾಗಿತ್ತು ಆದರೆ ಅವರು ಸ್ವಭಾವ ಸರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಉಳಿದ ಕಲಾಪದಿಂದ ಅಮಾನತು ಮಾಡಲಾಗಿದೆ.
ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರತಿಕ್ರಿಯೆ ನೀಡಿ ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಬಯಸುತ್ತಾರೆ, ಅದಕ್ಕಾಗಿಯೇ ಅವರು ಅವಿಶ್ವಾಸ ನಿರ್ಣಯವನ್ನು ತಂದಿದ್ದಾರೆ” ಎಂದು ಹೇಳಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಿಯಮಗಳು, ಕಾರ್ಯವಿಧಾನಗಳಂತೆ ನಡೆದುಕೊಳ್ಳಲಿ. ಅವರಿಗೆ ನಿಗದಿಪಡಿಸಿದ ಸಮಯದ ಪ್ರಕಾರ ಮಾತನಾಡಲಿ, ಅವರು ಹೆಚ್ಚು ಮಾತನಾಡಿದಷ್ಟೂ ನಮಗೆ ಒಳ್ಳೆಯದು, ಅವರು ಹೆಚ್ಚು ಮಾತನಾಡಬೇಕು ಅದನ್ನು ಬಿಟ್ಡು ಕಲಾಪಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದಿದ್ದಾರೆ.
ಮತ್ತೆ ಆರಂಭರಾಜ್ಯಸಭೆಯಲ್ಲಿ ಬೆಳಗ್ಗೆ ಆರಂಭವಾದ ಕಲಾಕ ವಿರೋಧ ಪಕ್ಷಗಳ ಗದ್ದಲದಿಂದ ಮಧ್ಯಾಹ್ನ ೧೨ ಗಂಟೆಗೆ ಸಭಾಪತಿ ಜಗದೀಪ್ ಧನಕರ್ ಮುಂದೂಡಿದ್ದರು.
. ಮತ್ತೆ ಸದನ ಆರಂಭವಾಗಿದ್ದು ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿವೆ.