ಕಲಾತ್ಮಕತೆಯಲ್ಲಿ ಅಡಗಿದೆ ಕಲಾವಿದನ ನೈಪುಣ್ಯ

ಕಲಬುರಗಿ:ಸೆ.10: ವರ್ಣಗಳ ಸಂಯೋಜನೆಯ ಕಲಾತ್ಮಕತೆಯಲ್ಲಿ ಕಲಾವಿದನ ನೈಪುಣ್ಯ ಅಡಗಿದೆ ಎಂದು ಪುಣೆಯ ಪ್ರಾತ್ಯಕ್ಷಿಕೆ ಕಲಾವಿದ ರಾಮಚಂದ್ರ ಖರಟಮಲ್‌ ತಿಳಿಸಿದರು.

ನಗರದ ಶರಣನಗರದಲ್ಲಿರುವ ಕೆ.ಸೀತನೂರ ಆರ್ಟ ಗ್ಯಾಲರಿಯಲ್ಲಿ ಶನಿವಾರ ರಂದು ಏರ್ಪಡಿಸಲಾಗಿದ್ದ ಕ್ಯಾಮಲ್ ನ್ಯೂ ಆರ್ಟಿಸ್ಟ್ ಎಚ್‌ಡಿ, ಅಕ್ರಲಿಕ್ ಕಲ‌ ಪ್ರಾತ್ಯಕ್ಷಿಕೆ ಸಮಾರಂಭದಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಉತ್ತಮ ಗುಣಮಟ್ಟದ ವರ್ಣಗಳ ಮೋಜನೆಯಿಂದ ಆಕರ್ಷಿಸುವಲ್ಲಿ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.

ಒಬ್ಬ ಅಪ್ಪಟ ಕಲಾವಿದನಿಗೆ ಹೇಳಿ ಮಾಡಿಸಿದಂತಹ ಕ್ಯಾಮಲ್ ಕಲರ್ ತನ್ನದೆ ಆದ ವೈಶಿಷ್ಟ್ಯವನ್ನು ಪಡೆದಿದೆ. ಭಾರತೀಯ ವರ್ಣ ಪ್ರಪಂಚದಲ್ಲಿ ಕಲಾವಿದನಿಗೆ ಕ್ಯಾಮಲ್ ಕಮಾಲ್ ನಿರೂಪಿಸಿದೆ. ಕಲಾವಿದನ ಏಳಿಗೆಗೆ ಕಾರಣವಾಗಿರುವ ವರ್ಣಗಳ
ವರ್ಣನೆಯನ್ನು ಕ್ಯಾನವಸ್‌ನಲ್ಲಿ 250 ಎಂಎಲ್, ಝಳಪಿಸುವ ರೀತಿಯಲ್ಲಿ ಕಲಾವಿದ ತನ್ನ ಕಲಾಕೃತಿಗಳ ಅಂದ ಚೆಂದಕ್ಕೆ ಮಾರು ಹೋಗಿರುವುದರಲ್ಲಿ ಯಾವ ಸಂದೇಹವಿಲ್ಲ ಎಂದರು.

ಕೋಕ್ಯೂಕ್ಯಾಮ್‌ಲಿನ್ ವಲಯ ಅಭಿವೃದ್ಧಿ ವ್ಯವಸ್ಥಾಪಕ ನಂದಕುಮಾರ ಗಾಯಕವಾಡ ಮಾತನಾಡಿ, ಕ್ಯಾಮಲ್ 1935 ರಲ್ಲಿ ಸ್ಥಾಪನೆಯಾಗಿ ಜಗತ್ತಿನಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ.

60 ಎಲ್ ಗಳಲ್ಲಿ ಕಲರ್ ಬಾಟಲ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಕಲಾವಿದರ ಕೈಚಳಕಕ್ಕೆ ವರ್ಣಗಳ ಲೇಪನದಿಂದ ಕಲಾಕೃತಿ ಉತ್ತಮವಾಗಿ ಹೊರಹೊಮ್ಮಲು ಕ್ಯಾಮಲ್ ಉತ್ತಮ ಪ್ರದರ್ಶನವಾಗಿದೆ. ಎಪ್ಪತ್ತರ ದಶಕದ ಭಾಗವಹಿಸಿದ್ದರು. ನಂತರ ಕ್ಯಾಮಲ್ ಕಂಪೆನಿಯು ಆರ್ಟ ಗ್ಯಾಲರಿಯಲ್ಲಿ ಪ್ರದರ್ಶಿಸಿ ಪ್ರಾತ್ಯಕ್ಷಿಕೆಗೆ ಕಾರಣವಾಗಿದೆ ಎಂದರು.

ನಾಡೋಜ ಖಂಡೇರಾವ ಉದ್ಘಾಟಿಸಿದರು. ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ಉದ್ಯಮಿ ಎನ್‌.ಎ.ಪಾಟೀಲ ವೇದಿಕೆಯಲ್ಲಿದ್ದರು. ಬಸವರಾಜ ಜಾನೆ, ಚಂದ್ರಹಾಸ ಜಾಲಿಹಾಳ್, ಸಂತೋಷ ಅಂದಾನಿ, ಅಶೋಕ ಹಿರೇಮಠ, ಬಿ.ಕೆ.ಬಡಿಗೇರ, ಡಾ.ಅಶೋಕ ಶಟಗಾರ, ಜಿತೇಂದ್ರ ಕೋಥಳಿಕರ, ನಾಗರಾಜ ಕುಲಕರ್ಣಿ, ರಾಜಕುಮಾರ ಕಾಳೆ, ಲಕ್ಷ್ಮಿಕಾಂತ ಮನೋಕರ್‌, ಡಿ.ಎಸ್.ದೇಸಾಯಿ, ಸಿದ್ದು ಮರಗೋಳ, ಡಾ ಶಾಹೀದ ಪಾಶಾ, ಬಿ.ಎನ್.ಪಾಟೀಲ, ಬಿ.ವಿ.ಕಮಾಜಿ, ಪ್ರಾತ್ಯಕ್ಷಿಕೆಯಲ್ಲಿ ಭಾವಹಿಸಿದ್ದರು.

ಎಚ್‌ಕೆಎಸ್‌ ಎಜಿ ಸಂಸ್ಥಾಪಕ ಟ್ರಸ್ಟಿ ಮೋಹನ್‌ ಸೀತನೂರ ಸ್ವಾಗತಿಸಿದರು. ಎಂ .ಸಂಜೀವ ನಿರೂಪಿಸಿದರು. ಡಾ ಅಶೋಕ ಶೆಟಕಾರ ವಂದಿಸಿದರು. ರಮೇಶ ಕುಲಕರ್ಣಿ ಪ್ರಾಥನಾ ಗೀತೆ ಹಾಡಿದರು. ಮಾನಯ್ಯಾ ಬಡಿಗೇರ, ವೀರೆಶ ಪತ್ತಾರ, ನಾರಾಯಣ ಎಂ ಜೋಶಿ ಕೆ.ಪಿ ಗಿರಿಧರ, ಮೀನಾಕ್ಷಿ ಗುತ್ತೇದಾರ ಮುಂತಾದವರು ಇದ್ದರು.