ಕಲಾಕುಂಚ ವಿದ್ಯಾನಗರ ಶಾಖೆಯ  ಅಧ್ಯಕ್ಷರ ಆಯ್ಕೆ

ದಾವಣಗೆರೆ-ಏ.೧; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ನಗರದ ವಿವಿಧ ಬಡಾವಣೆಗಳಲ್ಲಿ ಶಾಖೆಗಳನ್ನು ಸ್ಥಾಪಿಸಲಾಗಿ ದಾವಣಗೆರೆಯ ವಿದ್ಯಾನಗರ ಶಾಖೆಯ ನೂತನ ಅಧ್ಯಕ್ಷರಾಗಿ ರಾಜಶೇಖರ್ ಬೆನ್ನೂರು ಅವರನ್ನು ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.ವಿದ್ಯಾನಗರದ ಭರತಾಂಲಿ ನೃತ್ಯ ಶಾಲಾ ಸಭಾಂಗಣದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಲೀಲಾ ಸುಭಾಷ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಮುರುಗಯ್ಯ ಕುರ್ಕಿ ಸ್ವಾಗತಿಸಿದರು. ಈ ಶಾಖೆಯ ಗೌರವ ಅಧ್ಯಕ್ಷರಾಗಿ ಶ್ರೀಮತಿ ಸಾವಿತ್ರಿ ರೇವಣಸಿದ್ದಪ್ಪ, ಉಪಾಧ್ಯಕ್ಷರಾಗಿ ಶ್ರೀಮತಿ ನಂಜಮ್ಮ ಶಾಂತವೀರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಕಮ್ಮ ಗಂಗಾಧರ್, ಖಜಾಂಚಿಯಾಗಿ ಬಿ.ಎಂ.ಮುರಿಗಯ್ಯ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ರವಿಚಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಡಾ. ಮಂಗಳಾ ಶೇಖರ್, ಸಂಚಾಲಕರಾಗಿ ಶ್ರೀಮತಿ ರೇಖಾ ಕಿರಣ್, ಸಮಿತಿ ಸದಸ್ಯರಾಗಿ ಶ್ರೀಮತಿಯವರಾದ ಇಂದಿರಾ ಸೋಮಶೇಖರ್, ಲೀಲಾ ಸುಭಾಷ್, ಲತಾ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.2023-25ನೇ ಸಾಲಿನ 2 ವರ್ಷ ಅವಧಿಯಲ್ಲಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ವಿಚಾರ ವಿನಿಮಯ ಚರ್ಚೆ ಆಯಿತು. ಕೊನೆಯಲ್ಲಿ ಅಕ್ಕಮ್ಮ ಗಂಗಾಧರ್ ವಂದಿಸಿದರು.