ಕಲಾಕುಂಚ ವಾರ್ಷಿಕೋತ್ಸವ; ದ್ವಿಚಕ್ರ ವಾಹನಯಾನ

ದಾವಣಗೆರೆ, ಜ.16; ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 33ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ನಗರದ ಜಯದೇವ ವೃತ್ತದಿಂದ ಪ್ರಮುಖ ರಾಜಬೀದಿಗಳಲ್ಲಿ ಮಹಿಳೆಯರಿಂದ ದ್ವಿಚಕ್ರ ವಾಹನಯಾನ ಸರಳವಾಗಿ ಯಶಸ್ವಿಯಾಯಿತು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.ಕಲಾಕುಂಚ ಮಹಿಳಾ ವಿಭಾಗದಿಂದ ದ್ವಿಚಕ್ರ ವಾಹನಯಾನವನ್ನು ಹಮ್ಮಿಕೊಳ್ಳಲಾದ ಈ ಯಾನವನ್ನು ದಾವಣಗೆರೆ ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಜಯಮ್ಮ ಗೋಪಿನಾಯ್ಕರವರು ಕನ್ನಡ ಬಾವುಟ ಹಾರಿಸುವುದರೊಂದಿಗೆ ಉದ್ಘಾಟನೆ ಮಾಡಿದರು. ಕಲಾಕುಂಚದ ಮಹಿಳೆಯರೆಲ್ಲರು ಕನ್ನಡ ಬಾವುಟದ ವರ್ಣದ ಸೀರೆ, ಪೇಟದೊಂದಿಗೆ ಭಾಗವಹಿಸಿದ್ದು ಚಿತ್ತಾಕರ್ಷಕವಾಯಿತು. ಈ ಸಂದರ್ಭದಲ್ಲಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶಣೈ, ಸಮಿತಿ ಸದಸ್ಯರಾದ ಮಮತಾ ಕೊಟ್ರೇಶ್, ಲೀಲಾ ಸುಭಾಷ್, ಸುಮಾ ಏಕಾಂತಪ್ಪ, ರೇಣುಕಾ ರಾಮಣ್ಣ, ಮಧು ಸಂಕೇತ್, ಕಲಾಕುಂಚ ಕಸ್ತೂರ್ಬಾ ಶಾಖೆಯ ವಿ. ಕೃಷ್ಣಮೂರ್ತಿ, ಎಂ.ಎಸ್.ಚನ್ನಬಸವ ಶೀಲವಂತ, ಉಮೇಶ್ ಕೆ.ಸಿ. ಮುಂತಾದವರು ಉಪಸ್ಥಿತರಿದ್ದರು.