ಕಲಾಕುಂಚ, ಯಕ್ಷರಂಗದಿಂದ ಬಿ.ವಾಮದೇವಪ್ಪಗೆ ಬೆಂಬಲ

ದಾವಣಗೆರೆ.ಏ.೨೬;  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳು ಮೇ. 9 ರಂದು ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಕನ್ನಡ ಪರಿಚಾರಕ ಬಿ.ವಾಮದೇವಪ್ಪನವರಿಗೆ ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು, ಪೂರ್ಣ ಪ್ರಮಣದ ಸಹಕಾರ ಸಹಯೋಗದೊಂದಿಗೆ ಮತ ಚಲಾಯಿಸಿ ಅವರನ್ನು ದಾಖಲೆಯ ಅತೀ ಹೆಚ್ಚು ಮತಗಳೊಂದಿಗೆ ಗೆಲುವು ಸಾಧಿಸಲು ಬೆಂಬಲಿಸುವುದಾಗಿ ಈ ಮೇಲಿನ ಎಲ್ಲಾ ಸಂಘಟನೆಗಳ ಮುಖ್ಯಸ್ಥರಾದ ಸಾಲಿಗ್ರಾಮ ಗಣೇಶ್ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕನ್ನಡಪರ ಕಾಳಜಿಯ ಎಲ್ಲಾ ಹಂತಗಳಲ್ಲಿ ಯೋಗ್ಯರಾದ ಅರ್ಹತೆಯುಳ್ಳ ಸಮರ್ಥ ಅಭ್ಯರ್ಥಿ ಬಿ.ವಾಮದೇವಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ಹೆಚ್ಚುತ್ತದೆ ಎಂದು ಶೆಣೈ ತಮ್ಮ ಅಂತರಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.