ಕಲಾಕುಂಚ ಗೃಹಿಣಿ ಸ್ಪರ್ಧೆ ಫಲಿತಾಂಶ

ದಾವಣಗೆರೆ-ಮಾ.29;ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಮಹಿಳಾ ಅಂತರಾಷ್ಟಿçÃಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ “ದಾವಣಗೆರೆಯ ಗೃಹಿಣಿ ಸ್ಪರ್ಧೆ” ಯ ಫಲಿತಾಂಶ ಈ ಕೆಳಗಿನಂತಿದೆ ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ ತಿಳಿಸಿದ್ದಾರೆ.ಶ್ರೀಮತಿ ಸಂಧ್ಯಾ ಶ್ರೀನಿವಾಸ್ ಪ್ರಥಮ ಸ್ಥಾನ, ಶ್ರೀಮತಿ ಶ್ವೇತಾ ವೀರೇಶ್ ದ್ವಿತೀಯ ಸ್ಥಾನ, ಶ್ರೀಮತಿ ಶ್ವೇತಾ ವಿಜಯಕುಮಾರ್ ತೃತೀಯ ಸ್ಥಾನ ಪಡೆದಿರುತ್ತಾರೆ. ಇತ್ತೀಚಿನ ನಿರಂತರ ಎರಡು ದಿನಗಳ ಕಾಲ, ನೆನಪಿನ ಶಕ್ತಿ, ಆಶುಭಾಷಣ ಸ್ಪರ್ಧೆ, ಲಿಖಿತ ಪರೀಕ್ಷೆ, ರಸರಂಜನೆ, ಆಟೋಟಸ್ಪರ್ಧೆ, ಸ್ವಯಂ ಪ್ರತಿಭೆ, ಸಾಂಪ್ರಾದಾಯಿಕ ಉಡುಗೆ-ತೊಡುಗೆ, ಜಾಣ ಗಣಿತ, ಜಾಣ ಒಗಟು, ನೇರ ಪ್ರಶ್ನೋತ್ತರ ಹೀಗೆ ಹತ್ತು ಹಲವು ಸ್ಪರ್ಧೆಗಳಿಗೆ ಶ್ರೀಮತಿಯರಾದ ಹೇಮಾ ಶಾಂತಪ್ಪ ಪೂಜಾರಿ, ಲಲಿತಾ ಕಲ್ಲೇಶ್, ಲೀಲಾ ಸುಭಾಷ್, ಶಾರದಮ್ಮ ಶಿವನಪ್ಪ, ಸಾವಿತ್ರಿ ಜಗದೀಶ್, ಮಂಜುಳಾ ಸುನೀಲ್, ಶೈಲಾ ವಿನೋದ್ ದೇವರಾಜ್, ಅಕ್ಕಮ್ಮ, ಶ್ರೀಮತಿ ಚಂದ್ರಶೇಖರ ಅಡಿಗ ಮುಂತಾದವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ಪಾರದರ್ಶಕವಾಗಿ ತೀರ್ಪು ನೀಡಿದರು.