ಕಲಾಕುಂಚ, ಕಲಾಕುಂಚ ಮಹಿಳಾ ವಿಭಾಗಕ್ಕೆ ನೇಮಕ

 ದಾವಣಗೆರೆ.ಸೆ.೨೫; ಕಳೆದ ಮೂರು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಕನ್ನಡ ನಾಡು, ನುಡಿ, ಇತಿಹಾಸ ಪರಂಪರೆಯನ್ನು ವೈಭವೀಕರಿಸುವ ಹಂತದಲ್ಲಿ ವಾಣಿಜ್ಯ ನಗರಿಯನ್ನು ಸಾಂಸ್ಕೃತಿಕ ನಗರಿಯನ್ನಾಗಿ ಪರಿವರ್ತಿಸುವ ನಿಟ್ಟಿಯಲ್ಲಿ ಕ್ರಿಯಾಶೀಲವಾದ ಸಾಂಸ್ಕೃತಿಕ ಸಂಸ್ಥೆ ಕಲಾಕುಂಚ  ಹಾಗೂ ಕಲಾಕುಂಚ ಮಹಿಳಾ ವಿಭಾಗ ಅಧ್ಯಕ್ಷರುಗಳಾಗಿ ಕೆ.ಹೆಚ್.ಮಂಜುನಾಥ್ ಮತ್ತು ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಸರ್ವಾನುಮತದಿಂದ ಅವಿರೋಧವಾಗಿ ಪುನರಾಯ್ಕೆಯಾದರು.ಕಲಾಕುಂಚ ಸಂಸ್ಥೆ ಕಛೇರಿ ಸಭಾಂಗಣದಲ್ಲಿ ಇತ್ತೀಚಿಗೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ಸೇರಿದ ಸಂಸ್ಥೆಯ ಸರ್ವ ಸದಸ್ಯರ ಮಹಾಸಭೆಯಲ್ಲಿ 2021-23ನೇ ಸಲಿನ ನೂತನ ಪದಾಧಿಕಾರಿಗಳ ಆಯ್ಕೆ, ಪ್ರಕ್ರಿಯೆ ನಡೆಯಿತು. ಸಂಸ್ಥೆಯ ಆಶ್ರಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಕನ್ನಡ ಮಕ್ಕಳ ಕಾರ್ಯಕ್ರಮದ ಕುರಿತು ಚರ್ಚೆ, ವಿಚಾರ ವಿನಿಮಯ, ವಾರ್ಷಿಕ ಲೆಕ್ಕಪತ್ರ ಮಂಡನೆ, ಅನುಮೋದನೆ, ವಾರ್ಷಿಕ ವರದಿ ಮಂಡಿಸಲಾಯಿತು. ಲಾಕ್‌ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಾಕುಂಚದಿAದ ಅಂತರ್ಜಾಲ ತಾಣದಲ್ಲಿ ನಿರಂತರವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಒಂಬತ್ತು ಬಹುಮಾನ ಪಡೆದ ಶ್ರೀಮತಿ ಮಂಜುಳಾ ಸುನೀಲ್‌ರವರಿಗೆ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಕಲಾಕುಂಚ ವಿದ್ಯಾನಗರ ಶಾಖೆಯ ಅಧ್ಯಕ್ಷರಾದ ಬಿ.ದಿಳ್ಯಪ್ಪ, ಡಿ.ಸಿ.ಎಂ.ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಎಸ್.ಎಸ್.ಬಡಾವಣೆಯ ಶಾಖೆಯ ಅಧ್ಯಕ್ಷರಾದ ಸುಜಾತಾ ಮಂಜುನಾಥ್ ಉಪಸ್ಥಿತರಿದ್ದರು.ಕಲಾಕುಂಚ ಪ್ರಧಾನ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ನಲ್ಲೂರು ಲಕ್ಷö್ಮಣ್‌ರಾವ್, ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್, ಖಜಾಂಚಿ ನೀಲಾವರ ಭಾಸ್ಕರನಾಯ್ಕ, ಸಂಘಟನಾ ಕಾರ್ಯದರ್ಶಿ ಹೆಚ್.ಕೊಟ್ರಪ್ಪ ಕಿತ್ತೂರು, ಸಂಚಾಲಕರಾಗಿ ಬೇಳೂರು ಸಂತೋಷಕುಮಾರ್‌ಶೆಟ್ಟಿ, ಎಂ.ಎಸ್.ಪ್ರಸಾದ್, ಸಂಸ್ಥೆಯ ಕಛೇರಿ ಕಾರ್ಯದರ್ಶಿ ವಿಜಯಕುಮಾರ್‌ಶೆಟ್ಟಿ, ಸಹ ಸಂಚಾಲಕರಾಗಿ ಮಹದೇವ ಅಸಗೋಡು, ಸಮಿತಿ ಸದಸ್ಯರಾಗಿ ಬಿ.ಎಂ.ಮುರಿಗಯ್ಯ ಕುರ್ಕಿ, ಬಿ.ದಿಳ್ಯಪ್ಪ, ಎಸ್.ಶಿವನಪ್ಪ, ಡಿ.ಹೆಚ್.ಚನ್ನಬಸಪ್ಪ, ಪ.ವಿಶ್ವನಾಥ್, ಶ್ರೀಮತಿ ಶಾರದಮ್ಮ ಶಿವನಪ್ಪ, ಶ್ರೀಮತಿ ಪ್ರಭಾ ರವೀಂದ್ರ, ಶ್ರೀಮತಿ ಲಲಿತಾ ಕಲ್ಲೇಶ್ ಆಯ್ಕೆಯಾದರು.ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾಗಿ ಶ್ರೀಮತಿ ವಸಂತಿ ಮಂಜುನಾಥ್, ಉಪಾಧ್ಯಕ್ಷರಾಗಿ ಶ್ರೀಮತಿ ಶೈಲಾ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುನಂದಾದೇವಿ ಜಂಬನಗೌಡ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸಾವಿತ್ರಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಕುಸುಮಾ ಲೋಕೇಶ್, ಖಜಾಂಚಿ ಗಿರಿಜಮ್ಮ ನಾಗರಾಜಪ್ಪ, ಸಂಚಾಲಕರಾಗಿ ಶ್ರೀಮತಿ ಸುರೇಖಾ ಕುಬೇರ ಪಾಟೀಲ್, ಗೌರವ ಸಲಹೆಗಾರರಾಗಿ ಶ್ರೀಮತಿ ಚಂದ್ರಶೇಖರ ಅಡಿಗ, ಸಮಿತಿ ಸದಸ್ಯರಾಗಿ ಶ್ರೀಮತಿ ಶೈಲಾ ವಿನೋದ್ ದೇವರಾಜ್, ಶ್ರೀಮತಿ ಮಂಜುಳಾ ಸುನೀಲ್, ಶ್ರೀಮತಿ ಸುಮಾ ಏಕಾಂತಪ್ಪ, ಶ್ರೀಮತಿ ನಿರ್ಮಲಾ ರಾಜೇಂದ್ರಬಾಬು ಆಯ್ಕೆಯಾದರು.ಶ್ರೀಮತಿ ಸುರೇಖಾ ಕುಬೇರ ಪಾಟೀಲ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಶ್ರೀಮತಿ ಸಾವಿತ್ರಿ ಜಗದೀಶ್ ಸ್ವಾಗತಿಸಿದರು, ಕೊನೆಯಲ್ಲಿ ಜಿ.ಬಿ. ಲೋಕೇಶ್ ವಂದಿಸಿದರು.