ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೧; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿದ್ದು “ಕರ್ನಾಟಕ ಸುವರ್ಣ ಮಹೋತ್ಸವ” ಕುರಿತಾದ ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ನಮ್ಮ ನಾಡಿನ ಕನ್ನಡ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ಸುವರ್ಣ ಮಹೋತ್ಸವ ವೈಭವೀಕರಿಸುವ ಸದುದ್ದೇಶದಿಂದ ಯಾವುದೇ ವಯೋಮಾನದ ಪರಿಬೇಧವಿಲ್ಲದೆ ಸಾರ್ವಜನಿಕವಾಗಿ ಎ4 ಸೈಜ್‌ನ 5 ಪುಟಗಳಲ್ಲಿ ಕೈಬರವಣಿಗೆಯೊಂದಿಗೆ ಪ್ರಬಂಧ ಬರೆದು “ಕಲಾಕುಂಚ” ಭಾವ ಸಂಗಮ, 538/12, ಉದ್ಯಾನವನ ಸಂಖ್ಯೆ 6ರ ಹತ್ತಿರ, ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು, ದಾವಣಗೆರೆ-577004 ಈ ವಿಳಾಸಕ್ಕೆ 31-10-2023 ರೊಳಗೆ ತಲಪುವಂತೆ ಅಂಚೆ ಮೂಲಕ ಅಥವಾ ಕೊರಿಯರ್ ಮೂಲಕ ಕಳಿಸಬಹುದು ಎಂದು ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಮತಿ ಅನ್ನಪೂರ್ಣ ಪಾಟೀಲ್ ತಿಳಿಸಿದ್ದಾರೆ.ಸ್ಪರ್ಧಿಗಳು ತಮ್ಮ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ಸಂಖ್ಯೆ ಕನ್ನಡದಲ್ಲಿ ಬರೆಯಬೇಕು. ಆಂಗ್ಲಭಾಷೆಯಲ್ಲಿ ಬಂದ ಪ್ರಬಂಧ ಸ್ಪರ್ಧೆಗೆ ಸ್ವೀಕರಿಸುವುದಿಲ್ಲ. ಸ್ಪರ್ಧೆಯ ನಂತರ ಬಹುಮಾನ ವಿಜೇತರಾದವರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಪ್ರಮಾಣಪತ್ರ ಕಳಿಸಲಾಗುವುದು. ಹೆಚ್ಚಿನ ಮಾಹಿತಿಗೆ 9481909864, 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.