ದಾವಣಗೆರೆ-ಮಾ.31; ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ.ನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಅಂತರಾಷ್ಟಿçÃಯ ಕ್ರೀಡಾಪಟು ‘ಏಕಲವ್ಯ’ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಶಿವಮೊಗ್ಗ ಪೊಲೀಸ್ ಇಲಾಖೆಯ ಪಿ.ಎಸ್.ಐ. ಶ್ರೀಮತಿ ಕೆ.ಎಸ್.ಶೈಲಜಾ, ಶೈಕ್ಷಣಿಕ ಕ್ಷೇತ್ರದ ಹಿರಿಯ ಶಿಕ್ಷಕಿ ಶ್ರೀಮತಿ ನೀಲಮ್ಮ ಸಂಗನಬಸಪ್ಪ ಮಾಗಾನಹಳ್ಳಿ, ನಗರದ ಸ್ತಿçÃರೋಗ ತಜ್ಞರೂ ಹಿರಿಯ ಪರಿಸರ ವಾದಿ ಡಾ.ಶಾಂತಾ ಭಟ್, ಪತ್ರಿಕಾ ಮಾಧ್ಯಮದ ಕ್ಷೇತ್ರದ ಶ್ರೀಮತಿ ತೇಜಸ್ವಿನಿ ಪ್ರಕಾಶ್, ಮಹಾನಗರ ಪಾಲಿಕೆಯ ಸ್ವಚ್ಛ ಕರ್ಮಚಾರಿ ಶ್ರೀಮತಿ ರೇಣುಕಮ್ಮ ದುಗ್ಗಪ್ಪ ಇವರುಗಳನ್ನು ಸನ್ಮಾನಿಸಿ ಗೌರಿವಸಲಾಯಿತು. ವೇದಿಕೆಯಲ್ಲಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಗೌರವಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್, ಶ್ರೀಮತಿ ಪರ್ವಿನ್ ಅಮೀರ್ಜಾನ್, ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಮುಂತಾದವರು ಉಪಸ್ಥಿತರಿದ್ದರು.