ಕಲಾಕಾರನ ಕುಟುಂಬವನ್ನು ಬೀದಿಗೆ ತಂದ ಕೊರೊನಾ


19-ಬಾದಾಮಿ-1; “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬ ಗಾದೆಯಂತೆ ಇಡೀ ವರ್ಷದುದ್ದಕ್ಕೂ ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಕಲಾಕಾರನ ಬದುಕು ಕೊರೋನ ಆತಂಕದಿಂದ ಅಕ್ಷರಶಃ ಬೀದಿಗೆ ಬಂದು ಕಲಾಕಾರರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವುದು ಯಾರ ಕಣ್ಣಿಗೂ ಕಾಣುತ್ತಿಲ್ಲ. ಮೊದಲು ಬಂಡವಾಳ ಹಾಕಿ ನಾಜೂಜಿಕಿನಿಂದ ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರಿಸಿ ಗಣೇಶ ಚೌತಿ ಹಬ್ಬದ ಸಂದರ್ಭದಲ್ಲಿಯೇ ಮಾರಾಟ ಮಾಡಿ ಬದುಕಿನ ಬಂಡಿ ನಡೆಸುವ ಅದೆμÉ್ಟೂೀ ಕುಟುಂಬಗಳ ಬವಣೆಯನ್ನು ಯಾರು ಕೇಳದಂತಹ ಸ್ಥಿತಿ ನಿರ್ಮಾಣವಾಗಿದ್ದು ವಿಪರ್ಯಾಸವಾಗಿದೆ.ಹಲವು ವರ್ಷಗಳಿಂದಲೂ ಪರಿಸರ ನಾಶಕ್ಕೆ ಕಾರಣವಾಗಬಲ್ಲ ಬಹು ವರ್ಣಿತ, ಆಕರ್ಷಕ ಪಿಓಪಿ ಗಣೇಶ ವಿಗ್ರಹಗಳಿಗೆ ಬಹು ಬೇಡಿಕೆಯಿಂದ ಮಣ್ಣಿನ ವಿಗ್ರಹಗಳನ್ನು ತಯಾರಿಸುವ ಕಲಾಕಾರನಿಗೆ ಕವಡೆ ಕಾಸಿನ ಕಿಮ್ಮತಿಲ್ಲದಂತಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಸರಕಾರ ನಿμÉೀಧಿಸಿ ಪರಿಸರ ಸ್ನೇಹಿ ಮಣ್ಣಿನ ವಿಗ್ರಹ ತಯಾರಿಸುವ ಕಲಾಕಾರರ ಬದುಕಿನಲ್ಲಿ ಹೊಸ ಆಶಾ ಕಿರಣ ಮೂಡಿಸಿ ಪರಂಪರಾಗತ ಕಲೆಯನ್ನು ಮುಂದುವರೆಸಿಕೊಂಡು ಹೋಗಲು ಉತ್ತೇಜನ ನೀಡಿತು.ಈ ಕಾರಣದಿಂದಲೇ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬಹು ವೆಚ್ಚದ ಬೃಹತ್ ಗಾತ್ರದ ಮಣ್ಣಿನ ವಿಗ್ರಹಗಳನ್ನು ತಯಾರಿಸಿ, ಇನ್ನೇನು ಕಲಾಕಾರನ ಸಂಕಷ್ಟಗಳೆಲ್ಲ ದೂರಾದವು ಎನ್ನುವಷ್ಟರಲ್ಲಿ ಕೊರೊನಾ ಹೆಮ್ಮಾರಿಯ ಕರಿನೆರಳಿನಲ್ಲಿ ಕಲಾಕಾರನ ಬದುಕು ಕೊಚ್ಚಿಹೋಯಿತು.ಲಾಕ್ ಡೌನ್ ಕಾರಣದಿಂದ ಗಣೇಶ ವಿಗ್ರಹಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿμÁ್ಠಪಿಸಲು ಸರಕಾರ ನಿμÉೀಧ ಹೇರಿದ ಪರಿಣಾಮದಿಂದ ಕೊಳ್ಳುವವರಿಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಾಗಿ ಕಲಾಕಾರನ ಕೈಚಳಕದಿ ನಿರ್ಮಾಣವಾದ ವಿಗ್ರಹಗಳು ಆತನ ಕಣ್ಣೀರಿನಲ್ಲಿಯೇ ಕರಗಿ ಬದುಕಿಗೆ ತಣ್ಣೀರು ಬಟ್ಟೆಯೇ ಗತಿಯಾಗಿಸಿದೆ.ಸರಕಾರವು ಪರಿಸರ ಸ್ನೇಹಿ ಮಣ್ಣಿನ ವಿಗ್ರಹ ತಯಾರಿಸುವ ಕಲಾವಿದರ ಬದುಕಿಗೆ ಆಸರೆಯಾಗದೆ ನಿರಾಶೆ ಮೂಡಿಸಿದೆ.ಇನ್ನಾದರೂ ಸರಕಾರ ಎಚ್ಚೆತ್ತು ಇಂತಹ ನೂರಾರು ಕಲಾವಿದರ ಬದುಕಿಗೆ ಆರ್ಥಿಕ ಸಹಾಯ ನೀಡಿ ಪರಂಪರಾಗತ ಕಲೆ ಮತ್ತು ಕಲಾವಿದರನ್ನು ರಕ್ಷಣೆ ಮಾಡಿ ಅವರ ಬದುಕನ್ನು ಹಸನುಗೊಳಿಸಬೇಕಾಗಿದೆ.
ಬಾಕ್ಸ್-1;
“ಪರಂಪರಾಗತವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಕುಟುಂಬ ನಿರ್ವಹಿಸುತ್ತ ಬಂದಿರುವ ನಮಗೆ ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿತ ವ್ಯವಹಾರವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟದಾಯಕವಾಗಿದೆ.ಹಾಕಿದ ಬಂಡವಾಳದ ಬಡ್ಡಿಯ ಬೇರು ಉರುಳಾಗುವ ಮುನ್ನ ಕಲಾವಿದರ ರಕ್ಷಣೆಗೆ ಸರಕಾರ ಮುಂದಾಗಬೇಕು”
-ಮಂಜುನಾಥ ಹಲಗಲಿ, ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರು, ಕೊಂಕೊಕೊಪ್ಪ ಗ್ರಾಮದ ನಿವಾಸಿ.