ಕಲಾಂತಕ ಸದ್ದಿಲ್ಲದೆ ಪೂರ್ಣ

ಚಿತ್ರರಂಗದಲ್ಲಿ ಸದ್ದು ಮಾಡಿದ ವಿಷಯವನ್ನು ಮುಂದಿಟ್ಟುಕೊಂಡು ಚಿತ್ರೀಕರಣ ಮಾಡಿರುವ “ಕಾಲಂತಕ” ಚಿತ್ರದ ಸದ್ದಿಲ್ಲದೆ ಚಿತ್ರೀಕರಣ ಪೂರ್ಣ ಗೊಳಿಸಿದೆ. ಲಾಕ್‌ಡೌನ್ ತೆರವಾಗಿ ಚಿತ್ರಮಂದಿರ ಆರಂಔವಾದ ನಂತರ ಚಿತ್ರ ತೆರೆಯ ಮೇಲೆ ಬರುವ ಎಲ್ಲಾ ಸಾಧ್ಯತೆಗಳಿವೆ. ಚಿಕ್ಕಮಗಳೂರು ಸಮೀಪದ ನೈಜ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಅಂಬರೀಷ.ಎಂ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ. ಅದರಲ್ಲಿ ‘ಕಾಲಂತಕ’ ಸಿನಿಮಾವು ಸೇರಿಕೊಂಡಿದೆ.
ಅದೇ ರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿ ಯಾರು ಶೀರ್ಷಿಕೆಯಾಗುತ್ತಾರೆ ಎಂಬುದನ್ನು ಹೇಳಲಾಗಿದೆ. ಕತೆಯು ಅಬಚೂರು ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ. ಕಥೆಯನ್ನು ಚಿತ್ರದ ರೂಒದಲ್ಲಿ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಪೆನ್ನು ಬರಹ, ಸಿಗರೇಟು ಗಾಂಜ. ಇವರೆಡು ಕತೆಯಲ್ಲಿ ಪ್ರಮುಖವಾಗಿ ಬರುವುದರಿಂದ ಪೋಸ್ಟರ್ ನಲ್ಲಿ ಕೂಡ ಇದನ್ನೆ ತೋರಿಸಲಾಗಿದೆ. ಚಿತ್ರದಲ್ಲಿ ಕೆ.ಎಸ್.ಶ್ರೀಧರ್, ಪ ಯಶ್ವಂತ್ಶೆಟ್ಟಿ, ಅರ್ಚನಾಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಉಳಿದಂತೆ ಕಾರ್ತಿಕ್ಸಮಗ, ಸುಷ್ಠಿತಜೋಷಿ, ಧರ್ಮೇಂದ್ರಅರಸ್ ಮುಂತಾದವರು ಇದ್ದಾರೆ. ಜಯಂತ್ಕಾಯ್ಕಣಿ, ಕಿನ್ನಲ್ ರಾಜ್ ಸಾಹಿತ್ಯದ ಎರಡು ಗೀತೆಗಳಿಗೆ ಜ್ಯೂಡಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಶಾಂತಕುಮಾರ್, ಚಿತ್ರಕ್ಕೆ ಬಂಡವಾಳ ಹಾಕಿದ್ದು ಸಹ ನಿರ್ಮಾಪಕರಾಗಿ ಹರಿನಾಥ್.ಎಲ್ ಕೈ ಜೋಡಿಸಿದ್ದಾರೆ.