ಕಲಹಾಳೇಶ್ವರ ರಥೋತ್ಸವ

(ಸಂಜೆವಾಣಿ ವಾರ್ತೆ)
ಬಾದಾಮಿ,ಸೆ13: ತಾಲೂಕಿನ ಬೆಳವಲಕೊಪ್ಪ ಗ್ರಾಮದ ಆರಾಧ್ಯದೈವ ಕಲಹಾಳೇಶ್ವರ ಜಾತ್ರಾ ಮಹೋತ್ಸವ ಶ್ರಾವಣದ ಕೊನೆ ಸೋಮವಾರ ಜರುಗಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿμÉೀಕ, ಹೋಮ, ವಿಶೇಷ ಪೂಜೆ ನೆರವೇರಿತು. ನಂತರ ರಥೋತ್ಸವದ ಕಳಸ, ಹಗ್ಗ ಹಾಗೂ ರಥದ ಅಲಂಕಾರಕ್ಕಾಗಿ ಭಕ್ತರು ನೀಡಿದ ರುದ್ರಾಕ್ಷಿಮಾಲೆ, ಹೂವಿನ ಮಾಲೆಗಳನ್ನು ಗ್ರಾಮದ ರಾಜಬೀದಿಯಲ್ಲಿ ಡೊಳ್ಳು, ಹಲಗೆ, ಭಜನೆ ವಿವಿಧ ವಾಧ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಸ್ವಾಗತಿಸಲಾಯಿತು.
ನಂತರ ಮಹಾಪ್ರಸಾದ ಜರುಗಿತು. ಸಾಯಂಕಾಲ 6 ಗಂಟೆಗೆ ಶಿರೋಳದ ರೇವಣಸಿದ್ದೇಶ್ವರ ಶಾಸ್ತ್ರೀಗಳು ಗ್ರಾಮದ ಗುರು-ಹಿರಿಯರ ಸಮ್ಮುಖದಲ್ಲಿ ಮಹಾ-ರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸಂಜೆ ‘ಧರ್ಮ ಸಭೆ’ ಹಾಗೂ ರಾಜ್ಯಮಟ್ಟದ ಕಲಾವಿದರಾದ ರಾಜಶೇಖರ ಹಿರೇಮಠ ಇವರ ನೇತೃತ್ವದಲ್ಲಿ ‘ಜೀವನ ಬೆಳಕು’ ಕಲಾ ತಂಡ ಕೊತಬಾಳ ಮತ್ತು ಹಿರೇಮಣ್ಣೂರು ಇವರಿಂದ ಜಾನಪದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಗ್ರಾಮದ ಸಾವಿರಾರು ಭಕ್ತರು ಭಾಗಿಯಾಗಿದ್ದರು.