
ಕನ್ನಡದಲ್ಲಿ ಇತ್ತೀಚೆಗೆ ಕಿರುಚಿತ್ರಗಳು ಒಳ್ಳೆಯ ಕಥಾ ವಸ್ತುಗಳನ್ನು ಮುಂದಿಟ್ಟುಕೊಂಡು ಯುವ ಪ್ರತಿಭಾವಂತ ನಿರ್ದೇಶಕರು ತೆರೆಗೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅದರ ಸಾಲಿಗೆ ಮತ್ತೊಂದು ಸೇರ್ಪಡೆ “ಕಲರ್ಸ್ ಆಫ್ ಲವ್”.
ನಿರ್ದೇಶಕ ಯು.ವಿ.ಹರಿಶೌರ್ಯ 50 ನಿಮಿಷದ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಂಗಳೂರು ಕಡಲತೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ
ಮನೀಶ್ ಕೊಟ್ಯಾನ್ ನಾಯಕ. ಅನುಷಾ ರಾಜ್, ಪ್ರನುಪಗೌಡ ನಾಯಕಿಯರು. ಖಳನಾಗಿ ರಾಣಾರಂಜಿತ್ ಉಳಿದಂತೆ ಅಭಿಷೇಕ್‍ಶೆಟ್ಟಿ, ರವಿಲೀ, ರಾಘವ್‍ಸೂರಿ ಮುಂತಾದವರು ನಟಿಸಿದ್ದಾರೆ.
ಕಾವ್ಯಾತ್ಮಕ ಪ್ರೀತಿ ಕಥೆ ಎಂದು ಇಂಗ್ಲೀಷ್‍ನಲ್ಲಿ ಅಡಿಬರಹವಿದೆ. ಚೇತನ್‍ಕುಮಾರ್ ಮತ್ತು ಜಯಪ್ರಕಾಶ್ ಬಂಡವಾಳ ಹೂಡಿದ್ದಾರೆ. ಕಥಾನಾಯಕ ಬರಹಗಾರ ಕಲರ್ಸ್ ಆಫ್ ಲವ್’ ಎನ್ನುವ ಪುಸ್ತಕ ಬರೆದು ಮುಗಿಸುವುದೇ ಗುರಿ. ಈ ಮಧ್ಯೆ ಪ್ರೀತಿಯ ಬಲೆಗೆ ಸಿಲುಕುತ್ತಾನೆ. ಆದರೆ ಅವಳು ಮನೆಯವರ ಒತ್ತಾಯದ ಮೇಲೆ ಬೇರೋಬ್ಬನನ್ನು ಮದುವೆಯಾಗುತ್ತಾಳೆ. ಇದರಿಂದ ಬೇಸರಗೊಂಡು ಪ್ರೀತಿ ಎನ್ನುವುದು ಇಷ್ಟೇ ಅಂದುಕೊಂಡು ಬರೆಯುವುದರ ಮೇಲೆ ಗಮನ ಹರಿಸುತ್ತಾನೆ.
ಒಳ್ಳೆ ಗುಣ ಕಂಡು ಮತ್ತೊಬ್ಬ ಹುಡುಗಿ ಹಿಂದೆ ಬೇಳ್ತಾಳೆ. ಇವಳಿಂದ ದೂರ ಹೋಗಲು ಪ್ರಯತ್ನಪಟ್ಟರೂ ಆಕೆ ನೀನಿಲ್ಲದೆ ನಾನಿಲ್ಲವೆಂದು ಹೇಳುತ್ತಲೇ ಇರುತ್ತಾಳೆ. ಕೊನೆಗೆ ತನ್ನ ಗುರಿ ಸಾಧಿಸುತ್ತಾನಾ ಅಥವಾ ಅವಳ ಕೋರಿಕೆಗೆ ಮಾರು ಹೋಗುತ್ತಾನಾ ಎನ್ನುವುದನ್ನು ಚಿತ್ರದ ತಿರುಳು.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‍ಮುಂಡಾಡಿ ಉತ್ತಮ ಚಿತ್ರ ನೋಡಿದಂತೆ ಆಗಿದೆ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು.ಅಕ್ಷಯ್.ಎಸ್.ರಿಷಬ್ ಸಂಗೀತ, ಸಂತೋಷ್‍ರಾಜೇಂದ್ರನ್ ಛಾಯಾಗ್ರಹಣವಿದೆ.