ಕಲಬೆರಕೆ ಸೇಂದಿ ಮಾರಾಟ:ಇಬ್ಬರ ಬಂಧನ

ಕಲಬುರಗಿ ಜು 24: ಕಲಬೆರಕೆ ಸೇಂದಿ ತಯಾರಿಸಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.ನಗರದ ಅಳಂದ ಕಾಲೋನಿಯ ಅರಯೋಗಪ್ಪ ದೇವಪ್ಪ ಮತ್ತು ವಿಜಯನಗರ ಕಾಲೋನಿಯ ಸುನೀಲ ಅಂಬಯ್ಯ ಚೌಧರಿ ಬಂಧಿತರು. ರುಕಂತೋಲಾ ದರ್ಗಾ (ರಾಣಾಸ್ಪೀರ್ ದರ್ಗಾ)ಬಳಿ ಆರ್.ಟಿ ನಗರದ ಪ್ರಕಾಶ ದೇವಪ್ಪ ಮತ್ತು ಶಾಂತಾಬಾಯಿ ಪ್ರಕಾಶ ಅವರಿಗೆ ಸೇರಿದ ಕಟ್ಟಡದಲ್ಲಿ ಸೇಂದಿ ತಯಾರಿಕೆ ಮಾಡುತ್ತಿದ್ದರು.ಪ್ರಕಾಶ,ಶಾಂತಾಬಾಯಿ,ಹಾಗೂ ದ್ವಿಚಕ್ರ ವಾಹನ ಮಾಲೀಕ ಪರಾರಿಯಾಗಿದ್ದಾರೆ.
ಬಂಧಿತರಿಂದ ಒಂದು ದ್ವಿಚಕ್ರವಾಹನ,110 ಲೀಟರ್ ಕಲಬೆರಕೆ ಸೇಂದಿ,12 ಕೆಜಿ ಯೂರಿಯ ಸೇರಿ 57100ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ದಾಳಿಯಲ್ಲಿ ವಲಯ 2 ಅಬಕಾರಿ ನಿರೀಕ್ಷಕ ಸುಭಾಷ ಕೋಟಿ,ಉಪ ನಿರೀಕ್ಷಕ ನರೇಂದ್ರಕುಮಾರ ಹೊಸಮನಿ,ವಲಯ 1 ಅಬಕಾರಿ ಉಪನಿರೀಕ್ಷಕ ಅಣ್ಣಪ್ಪ ನವಲೆ,ಸಿಬ್ಬಂದಿ ರಾಜೇಂದ್ರನಾಥ ಮೇಳಕುಂದಿ,ಆಸಿಫ್ ಇಕಬಾಲ್,ಚಂದ್ರಶೇಖರ,ಚನ್ನಪ್ಪ ಸಾಹು,ಮಹಮ್ಮದ್ ಗುಲಾಮ್ ರಿಜ್ವಾನ್,ವಾಹನ ಚಾಲಕ ಸಂತೋಷ ಭಾಗವಹಿಸಿದರು.