ಕಲಬುರಗಿ: 7.23 ಲಕ್ಷ ರೂ.ಮೌಲ್ಯದ ಪಟಾಕಿ ಜಪ್ತಿ

ಕಲಬುರಗಿ,ಅ.14-ಸ್ಪೋಟಕ ಅಧಿನಿಯಮ ರೂಲ್-2008 ಉಲ್ಲಂಘಸಿ ಸಾರ್ವಜನಿಕ ಜೀವಕ್ಕೆ ಧಕ್ಕೆ ತರುವ ರೀತಿಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ನಗರದ ಸರಾಫ್ ಬಜಾರದ ಪ್ರಭಾಕರ ಆರ್.ಸೊಂತ ಕಿರಾಣ ಮತ್ತು ಜನರಲ್ ಫ್ಯಾನ್ಸಿ ಡೆಕೊರೇಟಿವ್ ಅಂಗಡಿಯ ಮೇಲೆ ಬ್ರಹ್ಮಪುರ ಪೊಲೀಸರು ದಾಳಿ ನಡೆಸಿ ವಿವಿಧ ಬಗೆಯ 7.23 ಲಕ್ಷ ಮೌಲ್ಯದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.
ಪಟಾಕಿ ಮಾರಾಟ ಅಂಗಡಿಯಲ್ಲಿ ಪಟಾಕಿ ದಾಸ್ತಾನನ್ನು ಕೆಳಮಹಡಿಯಲ್ಲಿ ಇರಿಸಬೇಕು ಎಂಬ ನಿಯಮವಿದ್ದರೂ ಮೊದಲು ಮಹಡಿಯಲ್ಲಿ ಇರಿಸಲಾಗಿದ್ದು, ಪಟಾಕಿ ಜೊತೆಗೆ ಎಣ್ಣೆ, ಕರ್ಪೂರ, ಬೆಂಕಿ ಪೊಟ್ಟಣ, ಹತ್ತಿ ಇತ್ಯಾದಿ ದಹನಶೀಲ ವಸ್ತುಗಳನ್ನು ಪಟಾಕಿಯೊಂದಿಗೆ ಇಡಲಾಗಿತ್ತು. ಹೀಗಾಗಿ ಅಂಗಡಿ ಮಾಲೀಕರಾದ ಪ್ರಭಾಕರ ಸೊಂತ, ಗಣೇಶ ಸೊಂತ ಅವರು ಪಟಾಕಿ ಮಾರಾಟ ಪರವಾನಿಗಿ ಹೊಂದಿದ್ದರೂ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ ಆದ್ದರಿಂದ ಪಟಾಕಿ ದಾಸ್ತಾನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬ್ರಹ್ಮಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.