ಕಲಬುರಗಿ: 49 ಕೋವಿಡ್ ಕೇರ್ ಸೆಂಟರ್ ಸ್ಥಾಪನೆ

ಕಲಬುರಗಿ,ಜ.14- ಸೌಮ್ಯ ಗುಣಲಕ್ಷಣ ಹೊಂದಿರುವವರ ಆರೈಕೆಗೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. 49 ಆಸ್ಪತ್ರೆಗಳನ್ನು ಕೋವಿಡ್ ಅಸ್ಪತ್ರೆಯನ್ನಾಗಿ ಘೋಷಿಸಲಾಗಿದ್ದು, ಕೊರೋನಾ ಮತ್ತು ಅದರ ರೂಪಾಂತರ ಓಮಿಕ್ರಾನ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನಧವಾಗಿದೆ ಎಂದು ಡಿ.ಎಚ್. ಓ ಡಾ. ಶರಣಬಸಪ್ಪ ಗಣಜಲಖೇಡ್ ತಿಳಿಸಿದ್ದಾರೆ.

ಆಕ್ಸಿಜನ್, ಔಷಧಿ ಕೊರತೆಯಿಲ್ಲ

ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ರೋಗಿಗಳ ಉಪಚಾರಕ್ಕೆ ಎಲ್ಲಾ ರೀತಿಯ ಅವಶ್ಯಕ ಔಷಧಿಗಳನ್ನು ಇತರೆ ವೈದ್ಯಕೀಯ ಸಾಮಗ್ರಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
ಲಸಿಕೆ ಹಾಕಿಸಿಕೊಳ್ಳಿ, ಕೋವಿಡ್ ನಿಯಮಾವಳಿ ಪಾಲಿಸಿ:
ಎಲ್ಲ ಅರ್ಹ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯಬೇಕು. ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡುವುದಲ್ಲದೆ ಆಗಾಗ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ಡಿ.ಹೆಚ್.ಓ ಡಾ. ಶರಣಬಸಪ್ಪ ಗಣಜಲಖೇಡ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.