ಕಲಬುರಗಿ: 2,119 ಔಷಧ ಮಾರಾಟ ಮಳಿಗೆ

ಕಲಬುರಗಿ,ಜು 11: ಕಲಬುರಗಿ ಜಿಲ್ಲೆಯಲ್ಲಿ 1 ಸರಕಾರಿ ಔಷಧ ಮಳಿಗೆ,1467 ಖಾಸಗಿ ಚಿಲ್ಲರೆ ಔಷಧ ಮಳಿಗೆ ಹಾಗೂ 651 ಖಾಸಗಿ ಸಗಟು ಔಷಧ ಮಳಿಗೆಗಳು ಸೇರಿದಂತೆ ಒಟ್ಟು 2,119 ಔಷಧ ಮಾರಾಟಮಳಿಗೆಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗಂಡೂರಾವ್ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಈ ಕುರಿತು ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದಸಚಿವರು ಕಲಬುರಗಿ ಜಿಲ್ಲೆಯಲ್ಲಿ ಔಷಧ ಪರಿವೀಕ್ಷಕರ 6 ಹುದ್ದೆ ಖಾಲಿ ಇವೆ ಎಂದಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿ 1 ಸರಕಾರಿ ಔಷಧ ಮಳಿಗೆ, 548 ಖಾಸಗಿ ಚಿಲ್ಲರೆ ಔಷಧ ಮಳಿಗೆ ಹಾಗೂ 113 ಖಾಸಗಿ ಸಗಟು ಔಷಧ ಮಳಿಗೆಗಳು ಸೇರಿದಂತೆ ಒಟ್ಟು 662 ಔಷಧ ಮಾರಾಟ ಮಳಿಗೆಗಳಿವೆ. ಯಾದಗಿರಿ ಜಿಲ್ಲೆಯಲ್ಲಿ ಔಷಧ ಪರಿವೀಕ್ಷಕರ 1 ಹುದ್ದೆ ಖಾಲಿ ಇದೆ ಎಂದು ಸಚಿವರು ಉತ್ತರ ನೀಡಿದ್ದಾರೆ.