ಕಲಬುರಗಿ ಹವ್ಯಾಸಿ ಛಾಯಾಚಿತ್ರಕಾರ ಡಾ.ಎಂ.ಡಿ.ಮಿಣಜಗಿಯವರಿಗೆ ಅಂತರ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಲಬುರಗಿ:ಜ.17: ವಿಶ್ವವಿಶ್ವೇರಯ್ಯಾ ನಗರದ ನಿವಾಸಿ ಹವ್ಯಾಸಿ ಛಾಯಾಚಿತ್ರಕಾರ ಡಾ.ಎಂ.ಡಿ. ಮಿಣಜಗಿಯವರು 8ನೇಯ ಕ್ಯಾಂಪೀನಾ 2023 ಅಂತರ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ ರುಮೇನಿಯಾದಲ್ಲಿ ಭಾಗವಹಿಸಿದ್ದು ಅವರಿಗೆ ಮೂರು ಛಾಯಚಿತ್ರಗಳಿಗೆ ಎಕ್ಸ್‍ಪ್‍ಟೇನ್ಸ್ ಪ್ರಶಸ್ತಿಗಳು ನೀಡಿದ್ದಾರೆ. ಅವುಗಳಲ್ಲಿ ಒಂದಾದ ಟ್ರಾಜಿಕ್ ಎಂಡ್ ಶೀರ್ಷಿಕೆಯ ಛಾಯಾಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಈ ಛಾಯಾಚಿತ್ರವು ಕಲಬುರಗಿಯ ಡಾ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಪ್ರಸಿಧ್ಧ ಕಲಾವಿದರಿಂದ ಪ್ರದರ್ಶಿಸಲಾದ ಎಂಟಿಗೋನಿ ಎಂಬ ಸುಂದರ ನಾಟಕದ ಒಂದು ದೃಶ್ಯವಾಗಿದೆ. ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ. ಜೋಶಿ ಅವರು ತಿಳಿಸಿದ್ದಾರೆ.