ಕಲಬುರಗಿ, ಶಿವಮೊಗ್ಗ. ಧಾರವಾಡದಲ್ಲಿ ಹೂಡಿಕೆ ವಲಯ ಎಸ್‍ಐಆರ್ ಸ್ಥಾಪನೆ ವಿಶೇಷ ಕಾನೂನು ರಚನೆ:ಶೆಟ್ಟರ್

ಕಲಬುರಗಿ, ಜ.12:ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರತ್ಯೇಕವಾದ ಕೈಗಾರಿಕಾ ನೀತಿ ರೂಪಿಸಬೇಕು ಎಂಬ ಬೇಡಿಕೆಯ ಬದಲಿಗೆ, ಕಲಬುರಗಿ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ವಲಯ (ಎಸ್‍ಐಆರ್) ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವರಾಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಎಸ್‍ಐಆರ್ ಸ್ಥಾಪಿಸಲು ವಿಶೇಷ ಕಾನೂನು ರಚನೆ ಮಾಡುವ ಮೂಲಕ ಈ ಭಾಗದ ಜನರ ಹಕ್ಕಾಗುವಂತೆ ಮಾಡುವ ಉz್ದÉೀಶದ ಹೊಂದಲಾಗಿದ್ದು, ಅದಕ್ಕಾಗಿ ಸೂಕ್ತ ನಿಯಮಗಳಿರುವ ಕರಡು ಮಸೂದೆಯನ್ನು ರಚನೆ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾನೂನು ಪರಿಣಿತರು ಮತ್ತು ಉದ್ಯಮಿಗಳ ಜತೆಗೆ ಚರ್ಚೆ ನಡೆಸಿ ಎರಡ್ಮೂರು ತಿಂಗಳಲ್ಲಿ ಕರಡು ಸಿದ್ಧಪಡಿಸಲಾಗುವುದು ಎಂದರು.
ಮಸೂದೆ ಕರಡು ಸಿದ್ಧಗೊಂಡ ನಂತರ ಅದನ್ನು ಅಧಿವೇಶನದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡು ಅಧಿಕೃತ ಕಾನೂನು ಮಾಡಲಾಗುವುದು. ಇದರಿಂದ ಈ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಗೆ ಸಹಕಾರಿಯಾಗಲಿದೆ. ಇದು ಕೇಂದ್ರ ಸರ್ಕಾರದ ಎಸ್‍ಇಝಡ್ ಮಾದರಿಯಲ್ಲಿಯೇ ರಾಜ್ಯಕ್ಕೆ ಸೀಮಿತವಾಗಿ ಎಸ್‍ಐಆರ್ ತಲೆ ಎತ್ತಲಿವೆ. ಈಗಾಗಲೇ ನಾನು ಸಹ ಉದ್ಯಮಿಗಳ ಜತೆಗೆ ಚರ್ಚೆ ನಡೆಸಿz್ದÉೀನೆ. ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಮಸೂದೆ ರೂಪಗೊಳ್ಳಲಿದೆ ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರೊನಾ ಅಬ್ಬರ ಕಡಿಮೆಯಾಗುತ್ತಿರುವುದರಿಂದ, ಕೈಗಾರಿಕೆಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಊರುಗಳಿಗೆ ಹೋದವರು ಮತ್ತೇ ತಮ್ಮ ಕೆಲಸ ಸ್ಥಳಗಳಿಗೆ ಬರುತ್ತಿದ್ದಾರೆ. ಹೀಗಾಗಿ ವಟಿವಾಹು ಚೇತರಿಸಿಕೊಳ್ಳುತ್ತಿದೆ. ಕ್ರಮೇಣ ಆರ್ಥಿಕ ಸ್ಥಿತಿಯು ಸುಧಾರಿಸುತ್ತಿದೆ.ಬೆಂಗಳೂರು ಹೊರತುಪಡಿಸಿದ ರಾಜ್ಯದ ಇನ್ನಿತರ ನಗರಗಳತ್ತ ಕೈಗಾರಿಕೆಗಳು ಬರಲು ಉತ್ತೇಜಿಸಲಾಗುವುದು. ಇನ್ನೊಂದು ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪುರಕಾಗಿ ಶೀಘ್ರದಲ್ಲಿಯೆ ವಿವಿಧ ಕಡೆಗಳಲ್ಲಿ ರೋಡ್ ಶೋ ನಡೆಸಲಾಗುವದು ಎಂದು ಹೇಳಿದರು.

ಸಚಿವರೊಂದಿಗೆ ಶಾಸಕರಾದ ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮೂಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಮುಖಂಡರಾದ ರಾಜುಗೌಡ ನಾಗನಹಳ್ಳಿ, ಶರಣಪ್ಪ ತಳವಾರ, ಶರಣು ಸಜ್ಜನಶೆಟ್ಟಿ, ರವಿ ಬಿರಾದಾರ, ರಾಜಕುಮಾರ ಕೋಟೆ,ಸಾಹೇಬಗೌಡ ಪಾಟೀಲ್, ಜಗದೀಶ ಮಾಲಿಪಾಟೀಲ್,ಅರುಣ ಕುಲಕರ್ಣಿ, ನಾಗರಾಜ ಮಹಾಗಾಂವ, ಸಂತೋಷ ಹಾದಿಮನಿ ಇತರರಿದ್ದರು.

ಸೊಸೆ ಸ್ಪರ್ಧೆ ಪಕ್ಷದ ನಿರ್ಧಾರವೇ ಅಂತಿಮ
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಸೊಸೆ (ಸುರೇಶ ಅಂಗಡಿ ಅವರ ಪುತ್ರಿ) ಸ್ಪರ್ಧಿಸುವು ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಈ ವಿಷಯದಲ್ಲಿ ಪಕ್ಷ ಮತ್ತು ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ. ಚುನಾವಣೆ ಘೋಷಣೆಯೇ ಆಗಿಲ್ಲ, ಹೀಗಿರುವ ಈಗ ಮಾತನಾಡುವುದು ಅಷ್ಟೊಂದು ಸಮಂಜಸ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಅವರೆಲ್ಲರೂ ಅಂಗಡಿಯವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ. ಒಂದು ವೇಳೆ ಅವರಿಗೆ ಕೊಡದೆ ಹೋದರೆ, ನಮಗೆ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ. ಅದನ್ನು ನಾಯಕರೆಲ್ಲರು ಪರಿಶೀಲಿಸಿ ನಿರ್ಧಾರಿಸಲಿದ್ದಾರೆ ಎಂದರು.
ಪಕ್ಷ ಸೂಚನೆ ನೀಡಿದರೆ ನಿಮ್ಮ ಸೊಸೆಯನ್ನು ಕಣಕ್ಕೆ ಇಳಿಸುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡಲಿಲ್ಲ. ಚುನಾವಣೆ ಘೋಷಣೆ ಬಳಿಕವೇ ಚರ್ಚೆ ನಡೆದು ನಿರ್ಧಾರವಾಗಲಿದೆ. ನಾವು ಪಕ್ಷ ನಿಷ್ಠರು ಎನ್ನುವ ಮೂಲಕ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೆ ಮಸ್ಕಿ ಮತ್ತು ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬುದರ ಬಗ್ಗೆ ಉತ್ತರಿಸಲ್ಲ ಎಂದರು. ಆದರೆ, ಮಸ್ಕಿಯಲ್ಲಿ ಪ್ರತಾಪಗೌಡ ಸಹಜವಾಗಿ ಅಭ್ಯರ್ಥಿಯಾಗುತ್ತಾರೆ ಎಂದಷ್ಟೆ ಹೇಳಿದರು.


ಕಲಬುರಗಿಯಲ್ಲಿ ಬಂಡವಾಳ ಹೂಡಿಕೆ ಸಮಾವೇಶ
ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕೇಂದ್ರಿಕೃತಕರಿಸಿ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಕಲಬುರಗಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಉz್ದÉೀಶಿಸಲಾಗಿದೆ. ಅಲ್ಲದೆ ದಾಲ್ ಮಿಲ್‍ಗಳ ಪುನಶ್ಚೇತನಕ್ಕೆ ಪ್ಯಾಕೇಜ್ ನೀಡಬೇಕು ಎಂಬ ಪ್ರಸ್ತಾವನೆ ಮತ್ತು ಬೇಡಿಕೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಹೈದರಾಬಾದ ಮೂಲದ 60 ಔಷಧ ಕಂಪನಿಗಳಿಗೆ ಘಟಕಗಳನ್ನು ಆರಂಭಿಸಲು ಅನುಮತಿಸಲಾಗಿದೆ.
| ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವರು