ಕಲಬುರಗಿ: ವೀಕೆಂಡ್ ಲಾಕ್ ಡೌನ್ ಇಲ್ಲ

ಕಲಬುರಗಿ,ಜೂ.2-“ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಈ ಹಿಂದೆ ಜಾರಿ ಮಾಡಲಾಗಿದ್ದ ಸಂಪೂರ್ಣ ವೀಕೆಂಡ್ ಲಾಕ್ ಡೌನ್ ಈ ಬಾರಿ ಇರುವುದಿಲ್ಲ, ಈ ಮೊದಲಿನಂತೆ ನಿರಂತರ ಲಾಕ್ ಡೌನ್ ಮಾತ್ರ ಮುಂದುವರಿಯಲಿದೆ” ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸ್ಪಷ್ಟಪಡಿಸಿದ್ದಾರೆ.
“ಸಂಜೆವಾಣಿ”ಗೆ ಈ ಮಾಹಿತಿ ನೀಡಿರುವ ಅವರು, “ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಈ ಹಿಂದೆ ವಾರದಲ್ಲಿ ಮೂರು ದಿನ ಮತ್ತು ವಾರದಲ್ಲಿ ನಾಲ್ಕುದಿನಗಳ ಕಾಲ ಸಂಪೂರ್ಣ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದರೆ ಈ ಬಾರಿ ವೀಕೆಂಡ್ ಲಾಕ್ ಡೌನ್ ಇರುವುದಿಲ್ಲ. ಮೊದಲಿನಂತೆ ಲಾಕ್ ಡೌನ್ ಮಾತ್ರ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.
ಸರ್ಕಾರ ಈ ಹಿಂದೆ ಹೊರಡಿಸಿದ ಆದೇಶದಂತೆ ಜೂ.7 ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.