
ಕಲಬುರಗಿ,ಮೇ 18: ಕಲಬುರಗಿ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದಿಂದ ಬಹುನಿರೀಕ್ಷಿತ ರಾತ್ರಿ ಲ್ಯಾಂಡಿಂಗ್ ಅನುಮತಿಯನ್ನು ಪಡೆದಿದೆ.
ಸದ್ಯಕ್ಕೆ ಕಲಬುರಗಿ ವಿಮಾನ ನಿಲ್ದಾಣವು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹಾರಾಟ ನಡೆಸುತ್ತಿದೆ. ರಾತ್ರಿ ಇಳಿಯುವಿಕೆಯ ಅನುಮತಿಯೊಂದಿಗೆ ಸೂರ್ಯಾಸ್ತದ ನಂತರವೂ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ನೈಟ್ ಲ್ಯಾಂಡಿಂಗ್ ಸಾಮಥ್ರ್ಯವು ಹೆಚ್ಚಿನ ವಿಮಾನಯಾನ ನಿರ್ವಾಹಕರು ತಮ್ಮ ವಿಮಾನಗಳನ್ನು ಕಲಬುರಗಿ ವಿಮಾನನಿಲ್ದಾಣದಿಂದ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ರನ್‍ವೇ 27 ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರನ್‍ವೇ 27 ಕ್ಕೆ ರಾತ್ರಿ ಲ್ಯಾಂಡಿಂಗ್ ಅನುಮತಿಯನ್ನು ನೀಡಿದೆ. ರನ್‍ವೇ 9 ರಲ್ಲಿ ರನ್‍ವೇ ಥ್ರೆಶೋಲ್ಡ್ ಶಿಫ್ಟ್ ಅನ್ನು ಕೈಗೊಳ್ಳಲು ಡಿಜಿಸಿಎ ಕೇಳಿದೆ. ಹೆಚ್ಚಿನ ಕಾರ್ಯಾಚರಣೆಗಳು ರನ್‍ವೇ 27 ರಲ್ಲಿ ಇರುವುದರಿಂದ, ಇದು ಆಗದೇ ಇರಬಹುದು.ರಾತ್ರಿ ಲ್ಯಾಂಡಿಂಗ್‍ಗಾಗಿ ಶ್ರಮಿಸಿದ ಎಲ್ಲಾ ಇಲಾಖೆಗಳ ಅವಿರತ ಪ್ರಯತ್ನಗಳಿಗಾಗಿ ಧನ್ಯವಾದಗಳು ಎಂದು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಡಾ ಚಿಲಕ ಮಹೇಶ್ ಅವರು ತಿಳಿಸಿದ್ದಾರೆ.