ಕಲಬುರಗಿ ಲೋಕಸಭಾ ಚುನಾವಣೆ:ಮಹಾನಗರ ಪಾಲಿಕೆ ಕಚೇರಿಯಲ್ಲಿ ಏಕಗವಾಕ್ಷಿ ಕೋಶ ಆರಂಭ

ಕಲಬುರಗಿ,ಮಾ.17:ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 45- ಗುಲಬರ್ಗಾ ಉತ್ತರ ಮತಕ್ಷೇತ್ರಕ್ಕೆ ಬರುವ ಸಾರ್ವಜನಿಕರಿಗಾಗಿ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಈ ಕೆಳಕಂಡಂತೆ ಕೌಂಟರ್‍ಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ಪಾಟೀಲ ದೇವಿದಾಸ್ ಅವರು ತಿಳಿಸಿದ್ದಾರೆ.
ಏಕಗವಾಕ್ಷಿ ಕೋಶ: ರಾಜಕೀಯ ಚಟುವಟಿಕೆ, ಸಭೆ-ಸಮಾರಂಭ ಹಾಗೂ ಮತ್ತು ಇತ್ಯಾದಿಗಳಿಗೆ ಪರವಾನಿಗೆ ಪಡೆಯಲು ಏಕಗವಾಕ್ಷಿ ಕೋಶವನ್ನು ತೆರೆಯಲಾಗಿದ್ದು, ಇದರ ಮೊಬೈಲ್ ಸಂಖ್ಯೆ 9343841485 ಇರುತ್ತದೆ
ದೂರು ಉಸ್ತುವಾರಿ ಕೋಶ: ಸಾರ್ವಜನಿಕರು ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದೂರು ಉಸ್ತುವಾರಿ ಕೋಶದ ಮೊಬೈಲ್ ಸಂಖ್ಯೆ 9972515953 ಹಾಗೂ ಇ-ಮೇಲ್ ವಿಳಾಸ electionsectioncitycorporation@gmail.com ಮೂಲಕ ತಮ್ಮ ದೂರು/ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಸಿ-ವಿಜಿಲ್: ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿ-ವಿಜಿಲ್ ಆ್ಯಪ್ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ. ಸಿ-ವಿಜಿಲ್ ಮೊಬೈಲ್ ಸಂಖ್ಯೆ 9164031111 ಇರುತ್ತದೆ. ಹೆಲ್ಪ್‍ಲೈನ್ ನಂಬರ್ 08472-241364 ಇರುತ್ತದೆ ಎಂದು ಅವರು ತಿಳಿಸಿದ್ದಾರೆ.