ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಕ್ಕೆಜನರಲ್ ಮ್ಯಾನೇಜರ್ ಅವರಿಗೆ ಪ್ರಸ್ತಾವನೆ

ಕಲಬುರಗಿ:ಡಿ.18:ಮುಂಬೈ ವಲಯದ ಜನರಲ್ ಮ್ಯಾನೇಜರ್ ಶ್ರೀ ಸಂಜೀವ ಮಿತ್ತಲ್ ರವರು ಸೋಲಾಪೂರ ವಿಭಾಗೀಯ ಕಚೇರಿಯ ವಿಶೇಷ ಭೇಟಿಯ ಸಭೆಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಜನರಲ್ ಮ್ಯಾನೇಜರ ಮುಂಬೈ ಇವರಿಗೆ ಕಲಬುರಗಿ ರೈಲ್ವೆ ಮ್ಯಾನೇಜರ ಇವರ ಮೂಲಕ ಕಲಬುರಗಿ ರೈಲ್ವೆ ವಿಭಾಗಿಯ ಕಚೇರಿ ಆರಂಭಿಸಲು ಸೇರಿದಂತೆ ಇನ್ನೀತರೆ ಮಹತ್ವದ ಬೇಡಿಕೆಗಳ ಬಗ್ಗೆ ಮನವಿ ಪತ್ರವನ್ನು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಸಲ್ಲಿಸಲಾಗಿದೆ.
ಬಹು ದಿನಗಳಿಂದ ನೆನೆಗುದಿಗೆ ಬಿದ್ದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಲು ಬರುವ 2021ನೇ ಸಾಲಿನ ಕೇಂದ್ರ ಬಜೆಟನಲ್ಲಿ ಅಧಿಕೃತವಾಗಿ ರೈಲ್ವೆ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ಪತ್ರದಲ್ಲಿ ಕೋರಿದೆ.
ಅದರಂತೆ ಕಲಬುರಗಿ-ಹೈದ್ರಾಬಾದ ಇಂಟರಸಿಟಿ, ಕಲಬುರಗಿ-ಗುಂತಕಲ ಡೆಮೋ, ಬೀದರ ಕಲಬುರಗಿ ಡೆಮೊ, ಸೊಲಾಪೂರ ಕೊಲ್ಹಾಪೂರ ಎಕ್ಸಪ್ರೆಸ್ (ಕಲಬುರಗಿ ವರೆಗೆ ವಿಸ್ತರಿಸುವ) ರೈಲುಗಳ ಆರಂಭಿಸಲು ಪತ್ರದಲ್ಲಿ ಆಗ್ರಹಿಸಲಾಗಿದೆ.
ಇದಲ್ಲದೇ ಇತರೆ ಬೇಡಿಕೆಗಳಾದ, 2014 ರಿಂದ ನೆನೆಗುದಿಗೆ ಬಿದ್ದಿರುವ ಸೊಲಾಪೂರ ಮಾರ್ಗದ ಎರಡನೆ ಪಿಟ್ ಲೈನ್ ಕಾಮಗಾರಿಯನ್ನು ತುರ್ತಾಗಿ ಆರಂಭಿಸಿ ಪೂರ್ಣಗೊಳಿಸಲು, ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಯಾಣಿಕರಿಗಾಗಿರುವ ಲಿಫ್ಟ ವ್ಯವಸ್ಥೆ ಕಾಮಗಾರಿ ಆರಂಭಿಸಲು, ಕಲಬುರಗಿ ರೈಲ್ವೆ ವಿಭಾಗಿಯ ಆಡಳಿತ ಕಚೇರಿಯ ನಿರ್ಮಾಣಕ್ಕೆ-2014 ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು ಮತ್ತು ಟೆಂಡರಗಳನ್ನು ಸಹ ಕರೆಯಲಾಗಿತ್ತು. ಸದರಿ ಟೆಂಡರಗಳನ್ನು ರದ್ದುಗೊಳಿಸಲಾ ಗಿದೆ. ಸದರಿ ಆಡಳಿತ ಕಚೇರಿಯ ಟೆಂಡರ ಪುನಃ ಕರೆದು ಕಾಮಗಾರಿ ಆರಂಭಿಸಲು ಸಮಿತಿ ಪತ್ರದಲ್ಲಿ ಜನರಲ್ ಮ್ಯಾನೇಜರ ಅವರಿಗೆ ಒತ್ತಾಯಿಸಿದೆ.
ಈ ಸಂಧರ್ಭದಲ್ಲಿ ಸಮಿತಿಯ ಮುಖಂಡರಾದ, ಮನೀಷ್ ಜಾಜು, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪ ಬಂಡಕ್, ಮಹ್ಮದ ಮಿರಾಜೊದ್ದೀನ್, ಅಸ್ಲಂ ಚೌಂಗೆ, ಸಾಲೋಮನ ದಿವಾಕರ, ಸಂಧ್ಯರಾಜ ಸ್ಯಾಮ್ಯುವೆಲ್, ಜ್ಞಾನಮಿತ್ರ ಸ್ಯಾಮ್ಯುವೆಲ್, ಮಲ್ಲಿನಾಥ ಸಂಗಶೆಟ್ಟಿ, ಶಾಂತಪ್ಪ ಕಾರಭಾಸಗಿ, ಶಿವಾನಂದ ಬಿರಾದಾರ, ಎಸ್.ಎಸ್.ಯಲಗೋಡ್, ವೀರೇಶ ಪುರಾಣಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.