ಕಲಬುರಗಿ-ಮೈಸೂರು ಮಾರ್ಗದಲ್ಲಿ ಸಂಚರಿಸುವ ಹೊಸ ಬಸ್‍ಗೆ ಚಾಲನೆ

ಕಲಬುರಗಿ:ಆ.31:ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಕಲಬುರಗಿ ವಿಭಾಗ-2 ರಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲಬುರಗಿಯಿಂದ ಮೈಸೂರಿಗೆ ಸಂಚರಿಸುವ ಹೊಸ ಬಸ್‍ನ್ನು ಗುರುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

    ಈ ಬಸ್ಸು ಕಲಬುರಗಿ-ಮೈಸೂರು ವಾಯಾ-ಶಹಾಪೂರ, ಲಿಂಗಸೂರ, ಹೊಸಪೇಟ್, ಚಿತ್ರದುರ್ಗಾ, ಹಿರಿಯೂರ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿಗೆ ಈ ಬಸ್ಸು ತಲುಪುತ್ತದೆ. ಕಲಬುರಗಿಯಿಂದ ಮೈಸೂರಿಗೆ ಸಂಚರಿಸುವ ಈ ಬಸ್ಸು ಕಲಬುರಗಿಯಿಂದ ಮಧ್ಯಾಹ್ನ  12 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.30 ಗಂಟೆಗೆ ಮೈಸೂರಿಗೆ ತಲುಪಲಿದೆ.  ಮರಳಿ ಈ ಬಸ್ಸು ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಕಲಬುರಗಿಗೆ ತಲುಪಲಿದೆ. ಸಾರ್ವಜನಿಕ ಪ್ರಯಾಣಿಕರು ಈ  ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ್ ಹುಸೇನ್, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಡಿಗ್ಗಿ, ಕಲಬುರಗಿ ಬಸ್ ಘಟಕ-2ರ ವ್ಯವಸ್ಥಾಪಕ ಕೃಷ್ಣಾ ಪವಾರ, ಘಟಕ-3ರ ವ್ಯವಸ್ಥಾಪಕ ರವೀಂದ್ರ ಹಾಗೂ ಬಸ್ ನಿಲ್ದಾಣ ಅಧಿಕಾರಿ ಅನೀಲ ಭೀಮನಗರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.