ಕಲಬುರಗಿ ಮೇಯರ್, ಉಪ ಮೇಯರ ಚುನಾವಣೆಕರಾರುವಾಕ್ ಭವಿಷ್ಯ ನುಡಿದ ಮಾಲಗತ್ತಿ ಶರಣರು

ಶಹಾಬಾದ:ಮಾ.31:ಚುನಾವಣೆ ಭವಿಷ್ಯವನ್ನು ಕರಾರುವಾಕ್ ಹೇಳುವ ಸುಕ್ಷೇತ್ರ ಮಾಲಗತ್ತಿ ಗ್ರಾಮದ ಶ್ರೀ ಹಿರೋಡೇಶ್ವರ ದೇವಸ್ಥಾನದ ಪೂಜ್ಯರಾದ ಚನ್ನಬಸವ ಶರಣರು ಕಲಬುರಗಿ ಮಹಾನಗರದ ಮೇಯರ್ ಮತ್ತು ಉಪಮೇಯರ ಆಯ್ಕೆ ಕುರಿತು ಒಂದು ದಿನದ ಮುಂಚೆಯೇ ಕರಾರುವಾಕ್ ಭವಿಷ್ಯ ಹೇಳಿದ್ದು. ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿ ಮೇಯರ್ ಉಪ ಮೇಯರ್ ಗೆಲ್ಲುವು ಸಾಧಿಸಲು ಕಾಂಗ್ರೆಸ್, ಬಿಜೆಪಿ ಒಂದು ದಿನ ಮುಂಚೆ ಹರಸಾಹಸ ಪಡುತ್ತಿದ್ದವರು. ಹೇಗಾದರು ಮಾಡಿ ಗೆಲುವಿನ ಮ್ಯಾಜೀಕ್ ಸಂಖ್ಯೆಗಾಗಿ ಪರದಾಡುತ್ತ, ಸಭೆ ಮೇಲೆ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ರಾತ್ರಿ ಸುಮಾರು 11.30ಕ್ಕೆ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದ ಪೂಜ್ಯರಾದ ಚನ್ನಬಸವ ಶರಣರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ, ಪೂಜ್ಯರೇ ಸಭೆ ಮೇಲೆ ಸಭೆ ನಡೆಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಮೇಯರ್,ಉಪಮೇಯರ ಆಯ್ಕೆ ವಿಷಯದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತಿಲ್ಲ, ಮುಂದೇನಾಗಬಹುದು ಎಂಬ ಚಿಂತೆ ಕಾಡುತ್ತಿದೆ ಎಂದು ಹೇಳಿದರು.

ಶರಣರು ಮೊಬೈಲ್ ಮೂಲಕವೇ ಕಾಂಗ್ರೆಸ್ ಪಕ್ಷದ ಪರವಾಗಿ ಮೂರು ಅಂಕಿ, ಬಿಜೆಪಿ ಪಕ್ಷದ ಪರವಾಗಿ ಮೂರು ಅಂಕಿ ತಿಳಿಸಲು ಹೇಳಿದರು. ಅವರ ಅಂಕಿಗಳ ಆಧಾರದ ಮೇಲೆ ಎರಡು ಪಕ್ಷ ಸಮಬಲ ಹೊಂದಿದೆ, ಆದರೆ, ಕಾಂಗ್ರೆಸ್ ಪಕ್ಷದ ಓರ್ವ ವ್ಯಕ್ತಿ ಗೈರು ಆಗುವದರಿಂದ ಬಿಜೆಪಿ ಕೇವಲ ಒಂದು ಮತದಿಂದ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಭಕ್ತರಾದ ಚಂದ್ರು ಕೊಳ್ಳಿ ರಾವೂರ, ರಾ.ಸ್ವ.ಸಂಘದ ಸುರೇಶ ರಾಠೋಡ, ಸುರೇಶ ಪಂಚಾಳ ರಾವೂರ, ಶಂಕರಲಿಂಗ ಯಾದಗಿರಿ ಅವರು ಪೂಜ್ಯರ ನುಡಿಗೆ ಸಾಕ್ಷಿಯಾದರು. ಪೂಜ್ಯರ ಭವಿಷ್ಯ ಮರುದಿನ ನಿಜವಾಗಿದ್ದರಿಂದ, ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸ್ವಂತ ಅಲ್ಲಮಪ್ರಭು ಪಾಟೀಲ ಅವರು ದೇವಸ್ಥಾನಕ್ಕೆ ಭೇಟ್ಟಿ ನೀಡಿ, ಶ್ರೀ ಹಿರೋಡೇಶ್ವರರ ಹಾಗೂ ಚನ್ನಬಸವ ಶರಣರ ದರ್ಶನ ಪಡೆದರು.

ಈ ಹಿಂದೆ ಸಂಸದ ಡಾ.ಉಮೇಶ ಜಾಧವ ಅವರಿಗೆ ಪಕ್ಷದ ಟಿಕೇಟ್ ಸಿಕ್ಕ ದಿನವೇ ಇಂತಿಷ್ಟು ಮತಗಳಿಂದ ಗೆಲ್ಲುತ್ತಿರಿ ಎಂದು ಭವಿಷ್ಯ ನುಡಿದಿದ್ದರು. ಮಹಾದಾಸೋಹ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ `11 ತಿಂಗಳಲ್ಲಿ ಹುಟ್ಟಿ ಬರುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು.