ಕಲಬುರಗಿ: ಮನುಸ್ಮೃತಿ ದಹನ

ಕಲಬುರಗಿ,ಡಿ.25-ಡಾ.ಬಿ.ಆರ್.ಅಂಬೇಡ್ಕರ್ ಅವರು “ಮನುಸ್ಮೃತಿ” ದಹನ ಮಾಡಿದ ಚಾರಿತ್ರಿಕ ಘಟನೆಯ ಸ್ಮರಣಾರ್ಥವಾಗಿ ಹೀರಾಪುರ ಮತ್ತು ಸಿದ್ಧಾರ್ಥ ನಗರದ ಗೆಳೆಯರ ಬಳಗದ ಸದಸ್ಯರು ನಗರದ ಹೀರಾಪುರ ವೃತ್ತದಲ್ಲಿಂದು ಮನುಸ್ಮೃತಿ ದಹನ ಮಾಡಿದರು.
ಪ್ರಕಾಶ ಔರಾದ್, ಅಲ್ಲಮಪ್ರಭು ನಿಂಬರ್ಗಾ, ಶಿವಕುಮಾರ ಮದ್ರಿ, ರಾಣೋಜಿ ಡಿಪ್ಟಿ, ಉದಯಕುಮಾರ ಡಿಪ್ಟಿ, ರೇಣುಕಾ ಸಿಂಗೆ, ಮೈಲಾರಿ ದೊಡ್ಡಮನಿ, ಸಂತೋಷ ನೂಲಾ, ನಾಗರಾಜ ಓಗೆಕರ್, ಶಶಿಧರ ಡಿಪ್ಟಿ, ಧೂಳಪ್ಪ ದ್ಯಾಮನಕರ್, ಭೀಮಾಶಂಕರ ದುಧನಿ, ಮಲ್ಲಿಕಾರ್ಜುನ ಕಟ್ಟಿಮನಿ ಸೇರಿದಂತೆ ಮತ್ತಿತರರು ಇದ್ದರು.