ಕಲಬುರಗಿ: ಬಿಜೆಪಿ ಡೇಟಾ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ

ಕಲಬುರಗಿ,ಮೇ.10-ನಗರದ ಸಂಗಮ ಕಾಂಪ್ಲೆಕ್ಸ್‍ನಲ್ಲಿರುವ ಬಿಜೆಪಿ ಡೇಟಾ ಕಾಲ್ ಸೆಂಟರ್ ಮೇಲೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಓರ್ವ ಯುವತಿ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಡೆಟಾ ಕಾಲ್ ಸೆಂಟರ್ ಕಳೆದ ಮೂರು ತಿಂಗಳಿಂದ ಸಕ್ರೀಯವಾಗಿದ್ದು, ಜನರಿಗೆ ಕರೆ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವೊಲಿಸುತ್ತಿದ್ದರು ಎನ್ನಲಾಗಿದೆ.
ಮತದಾನದ ದಿನವಾದ ಇಂದು ಸಹ ಯುವತಿಯರನ್ನು ಸೆಂಟರ್ ಕರೆತಂದು ಅವರಿಂದ ಮತದಾರರಿಗೆ ಕರೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.