ಕಲಬುರಗಿ ನಗರ ಪೋಲಿಸ್ ಆಯುಕ್ತರಾಗಿ ವೈ. ಎಸ್. ರವಿಕುಮಾರ

ಕಲಬುರಗಿ, ಮೇ. 21: ಕಲಬುರಗಿ ನಗರ ಪೋಲಿಸ್ ಆಯುಕ್ತರಾಗಿ 2007ನೇ ಬ್ಯಾಚ್‌ನ ಐ.ಪಿ.ಎಸ್. ಅಧಿಕಾರಿ ವೈ. ಎಸ್. ರವಿಕುಮಾರ ಅವರನ್ನು ನೇಮಿಸಿ ಸರಕಾರ ಆದೇಶ ಜಾರಿಮಾಡಿದೆ. ರವಿಕುಮಾರ ಅವರು ಬೆಂಗಳೂರು ನೇಮಕಾತಿ ವಿಭಾಗದ ಡಿಐಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಐಪಿಎಸ್ ಅಧಿಕಾರಿ ಎನ್. ಸತೀಶ್‌ಕುಮಾರ್ ಅವರನ್ನು ಕಲಬುರ್ಗಿ ನಗರ ಆಯುಕ್ತ ಸ್ಥಾನದಿಂದ ವರ್ಗಾವಣೆ ಮಾಡಿ, ಬೆಳಗಾವಿ ವಿಭಾದ ಐಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.