ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಯ ಪ್ರಭಾರ ಸ್ವೀಕಾರ

ಕಲಬುರಗಿ,ಮೇ.24:ರಾಜ್ಯ ಸರ್ಕಾರದ ದಿನಾಂಕ:23-05-2023ರ ಅಧಿಸೂಚನೆಯನ್ವಯ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮಂಗಳವಾರ (ಮೇ 23 ರಂದು) ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಯ ಪ್ರಭಾರ ವಹಿಸಿಕೊಂಡಿರುತ್ತಾರೆ.
ಅವರ ವೈಯಕ್ತಿಕ ಗಮನಕ್ಕೆ ತರಬಯಸುವ ಎಲ್ಲಾ ಪತ್ರಗಳು, ಅರೆ ಸರ್ಕಾರಿ ಪತ್ರಗಳು, ಗೌಪ್ಯ ಪತ್ರಗಳು ಮತ್ತು ಮುಖ್ಯವಾದ ಪತ್ರಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಮಿನಿ ವಿಧಾನಸೌಧದ ಪಕ್ಕದಲ್ಲಿ, ಸ್ಟೇಶನ್ ರೋಡ, ಕಲಬುರಗಿ ಕಚೇರಿ ವಿಳಾಸಕ್ಕೆ ಕಳುಹಿಸಲು ಕೋರಿದೆ.