ಕಲಬುರಗಿ ನಗರದಾದ್ಯಂತ ಜೂ. 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಆದೇಶ

ಕಲಬುರಗಿ,ಜೂ.7:ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ನಗರದಾದ್ಯಂತ 2021ರ ಜೂನ್ 7ರ ಬೆಳಗ್ಗೆ 6 ಗಂಟೆಯಿಂದ 2021ರ ಜೂನ್ 14ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯ ಸರ್ಕಾರವು ದಿನಾಂಕ: 07-05-2021, 21-05-2021 ಹಾಗೂ 03-06-2021 ರಂದು ಹೊರಡಿಸಿದ ಆದೇಶಗಳಲ್ಲಿನ ಪರಿಷ್ಕøತ ಮಾರ್ಗಸೂಚಿಗಳಲ್ಲಿನ ಎಲ್ಲಾ ಷರತ್ತಿಗೊಳಪಟ್ಟು ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144ರನ್ವಯ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಸಿ. ರವಿಕುಮಾರ್ ಅವರು ಕಲಬುರಗಿ ನಗರದಾದ್ಯಂತ ನಿμÉೀಧಾಜ್ಞೆಯನ್ನು ಜಾರಿಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಮೇಲ್ಕಂಡ ದಿನಾಂಕಗಳಂದು ಪ್ರತಿದಿನ ಬೆಳಗಿನ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಕರಗಳು, ಯಂತ್ರೋಪಕರಣಗಳು, ಬೀಜ ಹಾಗೂ ರಸಗೊಬ್ಬರ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.