ಕಲಬುರಗಿ ನಗರದಲ್ಲಿ ಕೋವಿಡ್ ಲಸಿಕಾಕರಣ ಮೆಗಾ ಕ್ಯಾಂಪ್ ಆಯೋಜನೆ

ಕಲಬುರಗಿ,ನ.16:ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೋವಿಡ್ ಲಸಿಕಾಕರಣದ ಮೆಗಾ ಕ್ಯಾಂಪ್‍ನ್ನು ಇದೇ ನವೆಂಬರ್ 17 ರಂದು ಬುಧವಾರ ಕಲಬುರಗಿ ನಗರದ ಕೆಳಕಂಡ ವಿವಿಧ ನಗರ ಆರೋಗ್ಯ ಕೇಂದ್ರದಲ್ಲಿನ ಲಸಿಕಾ ಬೂತಗಳಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಈ ಮೆಗಾ ಕ್ಯಾಂಪ್‍ನ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ಕಲಬುರಗಿ ನಗರ ಆರೋಗ್ಯ ಕೇಂದ್ರ (ಯುಪಿಹೆಚ್‍ಸಿ) ವಾರು ಲಸಿಕಾ ಕ್ಯಾಂಪ್ ಆಯೋಜಿಸಿದ ಸ್ಥಳಗಳ ವಿವರ ಇಂತಿದೆ.
ಅಶೋಕ ನಗರ: ಸಮತಾ ಕಾಲೋನಿ ಹನುಮಾನ ಮಂದಿರ, ಚುಮ್ಮನಚೂಡ ಅಂಗನವಾಡಿ ಕೇಂದ್ರ, ವಿಜಯನಗರ 2ನೇ ಅಂಗನವಾಡಿ ಕೇಂದ್ರ, ಕೃಷ್ಣಾ ನಗರ ಸರ್ಕಾರಿ ಶಾಲೆ ಹಾಗೂ ವಿಜಯನಗರ ಹನುಮಾನ ಮಂದಿರ.
ಹೀರಾಪುರ: ಬಿದಾಪೂರ ಕ್ರಾಸ್ ಹನುಮಾನ ಮಂದಿರ, ಸಿಐಬಿ ಕಾಲೋನಿ ಇಎಸ್‍ಐ ಆಸ್ಪತ್ರೆ, ಪಟೇಲ್ ಕಾಲೋನಿ ಅಂಗನವಾಡಿ ಕೇಂದ್ರ, ಹೀರಾಪುರ ಹನುಮಾನ ಮಂದಿರ, ಕೇಂದ್ರ ಬಸ್ ನಿಲ್ದಾಣ, ಯುಪಿಹೆಚ್‍ಸಿ ಹೀರಾಪುರ, ಕೆಇಬಿ ಕಾಲೋನಿ ಅಂಗನವಾಡಿ ಕೇಂದ್ರ, ಶಹ ಜಿಲಾನಿ ದರ್ಗಾ ಅಂಗನವಾಡಿ ಕೇಂದ್ರ-2, ಸಿದ್ದಾರ್ಥ ನಗರ ಅಂಗನವಾಡಿ ಕೇಂದ್ರ ಹಾಗೂ ಹೀರಾಪುರ ಅಂಗನವಾಡಿ ಕೇಂದ್ರ-9.
ಐಸಿಡಿಎಸ್: ಜ್ಞಾನ ಗಂಗಾ ಮಂದಿರ ಮಕ್ಕಾ ಲೇಔಟ್, ಮಹಾವೀರ ನಗರ, ಕಾರ್ತಿಕ ಹೈಸ್ಕೂಲ್ ರೋಡ, ಕಲಬುರಗಿ ಕಾರ್ಪೋರೇಶನ್ ಕಚೇರಿ, ಶಹಾ ಆಸ್ಪತ್ರೆ ಹಾಗೂ ಪೊಲೀಸ್ ಕಾಲೋನಿ ಅಂಗನವಾಡಿ ಕೇಂದ್ರ-1.
ಖಾನಾಪೂರ: ಅನ್ವರ ಸ್ಕೂಲ್ ಯಾದುಲ್ಲಾ ಕಾಲೋನಿ, ಅಂಜುಮ ಸ್ಕೂಲ್, ನ್ಯಾಷನಲ್ ಕಾಲೇಜು, ರೋಜಾ ತೈನ್ ಸ್ಕೂಲ್ ಹಾಗೂ ಗಂಜ್ ಹೌಸಿಂಗ್ ಬೋರ್ಡ್ ಕಾಲೋನಿ.
ಮುಕ್ತಂಪುರ: ಭೋವಿ ಗಲ್ಲಿ ಅಂಗನವಾಡಿ ಕೇಂದ್ರ, ಬಡೇಪುರ ಅಂಗನವಾಡಿ ಕೇಂದ್ರ, ಮಿಲನ್ ಚೌಕ್ ಅಂಗನವಾಡಿ ಕೇಂದ್ರ, ಬಸವೇಶ್ವರ ಕಾಲೋನಿ ಅಂಗನವಾಡಿ ಕೇಂದ್ರ, ಯುಪಿಹೆಚ್‍ಸಿ ಮುಕ್ತಂಪುರ, ಮುಕ್ತಂಪುರ ಅಂಗನವಾಡಿ ಕೇಂದ್ರ ಹಾಗೂ ಶಿವಲಿಂಗೇಶ್ವರ ಕಾಲೋನಿ.
ಮಾಣಿಕೇಶ್ವರಿ: ಎ. ಆಶ್ರಯ ಕಾಲೋನಿ ಹಾಗೂ ಯುಪಿಹೆಚ್‍ಸಿ ಮಾಣಿಕೇಶ್ವರಿ.
ಎನ್.ಆರ್. ನಗರ: ಯುಪಿಹೆಚ್‍ಸಿ ಎನ್.ಆರ್.ನಗರ, ಬುಲಂದ ಪರ್ವೇಜ್ ಕಾಲೋನಿ-4, ಇತ್ತೇಹಾದ್ ಕಾಲೋನಿ, ಮಹೆಬೂಬ್ ನಗರ ಹಾಗೂ ಅಬುಬಕರ್ ಕಾಲೋನಿ.
ಶಹಾಬಜಾರ್: ವಿಶ್ವರಾಥ್ಯ, ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರ-1, ಆಶ್ರಯ ಕಾಲೋನಿ-2, ಕಟಗಾರ ಗಲ್ಲಿ ಹಾಗೂ ಸುಲ್ತಾನಪುರ ಕ್ರಾಸ್ ಇಟ್ಟಂಗಿ ಭಟ್ಟಿ.
ಶಿವಾಜಿ ನಗರ: ಭವಾನಿ ನಗರ ಅಂಗನವಾಡಿ ಕೇಂದ್ರ, ರಾಮಮಂದಿರ ಲಕ್ಷ್ಮೀ ಮಂದಿರ, ಕೆ.ಕೆ. ನಗರ ಹನುಮಾನ ಮಂದಿರ, ಶಿವಾಜಿ ನಗರ ಅಂಗನವಾಡಿ ಕೇಂದ್ರ-8, ರಾಜೀವಗಾಂಧಿ ನಗರ ನಂದೇಶ್ವರ ಟೆಂಪಲ್, ಮುಸ್ಲಿಂ ಸಂಘ ಅಂಗನವಾಡಿ ಕೇಂದ್ರ-1 ಹಾಗೂ ಮಿಲ್ಲತ್ ನಗರ ಅಂಗನವಾಡಿ ಕೇಂದ್ರ-2.
ಸೆಂಟ್ ಜಾನ್ ಅಂಬುಲೆನ್ಸ್: ಸಿದ್ದೇಶ್ವರ ಕಾಲೋನಿ ಅಂಗನವಾಡಿ ಕೇಂದ್ರ, ಕೃಷ್ಣಾನಗರ ಅಂಗನವಾಡಿ ಕೇಂದ್ರ, ರೆಡ್‍ಕ್ರಾಸ್ ಸೊಸೈಟಿ ಹಾಗೂ ಯುಪಿಹೆಚ್‍ಸಿ ಸೆಂಟ್ ಜಾನ್.
ಯು.ಎಫ್.ಡಬ್ಲ್ಯೂಸಿ.: ತಾರಫೈಲ್ ಅಂಗನವಾಡಿ ಕೇಂದ್ರ-5, ಇಂದಿರಾ ನಗರ ಅಂಗನವಾಡಿ ಕೇಂದ್ರ-2, ಅಂಬಿಕಾ ನಗರ ಅಂಗನವಾಡಿ ಕೇಂದ್ರ-1, ರಹೆಮತ ನಗರ ಹುದಾ ಮಸೀದಿ, ಜೆಮಶೆಟ್ಟಿ ನಗರ ಹಾಗೂ ಹನುಮಾನ ಮಂದಿರ.