ಕಲಬುರಗಿ ನಗರಕ್ಕೆ ಮೇ 27 ರಿಂದ 29 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಮೇ.24:ಕೊಳವೆ ಮಾರ್ಗದಲ್ಲಿ ಸೋರುವಿಕೆ ಕಂಡು ಬಂದಿದ್ದು, ಇದರ ತುರ್ತು ದುರಸ್ಥಿ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಇದೇ ಮೇ 27 ರಿಂದ 29 ರವರೆಗೆ ಮೂರು ದಿನಗಳ ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಐಡಿಎಫ್‍ಸಿ, ಕೆಯುಡಬ್ಲ್ಯೂಎಸ್‍ಎಂಪಿ, ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

  ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯ ಮತ್ತು  ಕೋಟನೂರ ಮಧ್ಯಂತರ ನೀರೇತ್ತುವ ಯಂತ್ರಗಾರ ಪಂಪಿನ ಮನೆಗಳಲ್ಲಿ ಪಂಪಿನ ಮ್ಯಾನಿಫೋಲ್ಡ್ ಹಾಗೂ ಇನ್ನಿತರ ಮುಖ್ಯ ಕೊಳವೆ ಮಾರ್ಗದಲ್ಲಿ ಅಳವಡಿಸಲಾಗಿರುವ 900 ಎಂ.ಎಂ ಎಂ.ಎಸ್./ 750 ಪಿಎಸ್‍ಸಿ/ 200 ಎಂ.ಎಂ. ಎಂ.ಎಸ್ ವ್ಯಾಸದ ಕೊಳವೆ ಮಾರ್ಗದಲ್ಲಿ ಸೋರುವಿಕೆ ಹೈಕೋರ್ಟ್ ಹತ್ತಿರ, ಮಿರ್ಚಿ ಗೋಡಾನ್ ರಿಂಗ್ ರೋಡ್ ಹತ್ತಿರ, ಡಬರಬಾದ ಕ್ರಾಸ್, ರಾಮ ಮಂದಿರ ಸರ್ಕಲ್, ಆಳಂದ ಚೆಕ್ ಪೋಸ್ಟ್, ಶೆಟ್ಟಿ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್ ಮುಕ್ತಾಂಬಿಕಾ ಕಾಲೇಜು ಎದುರುಗಡೆ, ರಸ್ತೆಗಳಲ್ಲಿರುವ ಕೊಳವೆ ಮಾರ್ಗದಲ್ಲಿ ಸೋರುವಿಕೆ ಕಂಡು ಬಂದಿರುತ್ತದೆ. 
   ಇದರ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಸಾರ್ವಜನಿಕರು ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್‍ದೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.