ಕಲಬುರಗಿ- ದೆಹಲಿ ನಡುವೆ ವಿಮಾನ ಹಾರಾಟ: ಬುಕ್ಕಿಂಗ್ ಆರಂಭ

ಕಲಬುರಗಿ,ನ.10: ಜಿಲ್ಲೆಯ ನಿವಾಸಿಗಳಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ನವೆಂಬರ್ 18ರಂದು ಕಲಬುರಗಿಯಿಂದ ರಾಜಧಾನಿ ದೆಹಲಿಗೆ ವಾರದಲ್ಲಿ ಮೂರು ಬಾರಿ ವಿಮಾನ ಹಾರಾಟ ನಡೆಸಲಿದೆ ಎಂದು ಸ್ಟಾರ್ ಏರ್ ತಿಳಿಸಿದೆ.
ಸ್ಟಾರ್ ಏರ್ ವೇಳಾಪಟ್ಟಿ ಪ್ರಕಾರ ಕಲಬುರಗಿಯಿಂದ ದೆಹಲಿಗೆ ಮತ್ತು ದೆಹಲಿಯಿಂದ ಕಲಬುರಗಿಗೆ ಮಂಗಳವಾರ, ಬುಧವಾರ ಹಾಗೂ ಶನಿವಾರ ವಿಮಾನ ಹಾರಾಟ ಮಾಡಲಿದ್ದು, ಬುಕ್ಕಿಂಗ್ ಸಹ ಆರಂಭವಾಗಿದೆ ಎಂದು ಸಂಸ್ಥೆ ಹೇಳಿದೆ.
ಸ್ಟಾರ್ ಆಫ್ ಬೆಂಗಳೂರು ಕಲಬುರಗಿ- ಬೆಂಗಳೂರು ಹಾಗೂ ಕಲಬುರಗಿ- ಹುಬ್ಬಳ್ಳಿ ಹಾಗೂ ಇತ್ತೀಚೆಗೆ ಕಲಬುರಗಿಯಿಂದ ಮುಂಬಯಿಗೆ ವಿಮಾನ ಹಾರಾಟ ಆರಂಭಿಸಿತ್ತು. ಸದ್ಯ ನವೆಂಬರ್ 18ರಿಂದ ದೆಹಲಿಗೂ ಬುಕ್ಕಿಂಗ್ ಆರಂಭಿಸಿ ರಾಜಧಾನಿಗೆ ಪ್ರಯಾಣಿಸುವವರಿಗೆ ಅನುಕೂಲ ಮಾಡಿಕೊಟ್ಟಿದೆ.