ಕಲಬುರಗಿ ಜಿಲ್ಲೆ ಶಾಸನಗಳ ತವರು ಮನೆ : ಪ್ರೋ.ದೇವರಕೊಂಡಾ ರೆಡ್ಡಿ

ಕಲಬುರಗಿ,ಜು.26: ಕಲಬುರಗಿ ಜಿಲ್ಲೆಯಲ್ಲಿ ಸುಮಾರು 400 ಕ್ಕಿಂತ ಹೆಚ್ಚಿನ ಶಾಸನಗಳು ಲಭ್ಯವಾಗಿವೆ. ಅದರಲ್ಲಿ ಸನ್ನತಿಯ ಕನಗನಹಳ್ಳಿಯಲ್ಲಿ ಸುಮಾರು 200 ಕ್ಕಿಂತ ಹೆಚ್ಚಿನ ಶಾಸನಗಳಿವೆ ಎಂದು ಸರಕಾರಿ (ಸ್ವಯತ್ತ) ಕಾಲೇಜಿನ ಇತಿಹಾಸ ವಿಭಾಗದಲ್ಲಿ ಏರ್ಪಡಿಸಿದ ದತ್ತಿ ಉಪನ್ಯಾಸದಲ್ಲಿ ಕಲಬುರಗಿ ಇತಿಹಾಸ ವಿಭಾಗ ಸರಕಾರಿ ಮಹಾವಿದ್ಯಾಲಯ (ಸ್ವಯತ್ತ) ಕಲಬುರಗಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂ ಹಾಗೂ ದಿ ಮಿಥಿಕ್ ಸೊಸೈಟಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪಂಡಿತ ಬಿ.ಶಿವಮೂರ್ತಿ ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರು ಹಾಗೂ ಶಾಸನ ತಜ್ಞರಾದ ಪ್ರೋ.ದೇವರಕೊಂಡಾ ರೆಡ್ಡಿಯವರು ಹೇಳಿದರು. ಮೌರ್ಯರ, ಶಾತವಾಹನರ ಕಾಲದ ಈ ಶಾಸನಗಳು ಕಲಬುರಗಿ ಜಿಲ್ಲೆಯ ಪರಂಪರೆಯ ಪ್ರತಿಕವಾಗಿವೆ. ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ಸಿಕ್ಕ ಅಶೋಕನ ಬೃಹತ ಶಿಲ ಫಲಕ ಭಾರತದ ಶಾಸನ ತಜ್ಞರ ಗಮನವನ್ನು ಸೆಳೆದ ಪ್ರಮುಖ ಶಾಸನವಾಗಿದೆ. ಜಿಲ್ಲೆಯ ಆಳಂದ, ಜೇವರ್ಗಿ, ಚಿತ್ತಾಪುರ ಹಾಗೂ ಸೇಡಂಗಳಲ್ಲಿ ಸಿಕ್ಕಿರುವ ಶಾಸನಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ದತ್ತಿ ಉಪನ್ಯಾಸದಲ್ಲಿ ಡಾ. ಶಶಿಶೇಖರ ರೆಡ್ಡಿ ಇತಿಹಾಸ ಪ್ರಾಧ್ಯಾಪಕರು ಹೈದ್ರಾಬಾದ ಕರ್ನಾಟಕ ವಿಮೋಚನೆಯ ಪ್ರಮುಖ ಹಂತಗಳನ್ನು (1724 ರಿಂದ 1948) ಕುರಿತು ತಮ್ಮ ಉಪನ್ಯಾಸದಲ್ಲಿ ವಿವರಿಸುತ್ತಾ, ರಜಾಕಾರರ ದೌರ್ಜನ್ಯಗಳು ಸ್ಥಳಿಯರನ್ನು ಸ್ವತಂತ್ರ್ಯ ಆಂದೋಲನದಲ್ಲಿ ದುಮುಕುವಂತೆ ಮಾಡಿತು ಎಂದು ಹೇಳಿದರು.
ಮಂಗಳವಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೋ. ಶಿವಪುತ್ರಪ್ಪ ಬೆಡಜುರಗಿ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಇವರು ಸರಕಾರಿ ಕಾಲೇಜುಗಳು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ನಿರಂತರವಾಗಿ ಶ್ರಮಿಸುತ್ತವೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಬಹುದೆಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹೇಳಿದರು.
ಡಾ. ಶಂಕರೆಪ್ಪ ಹತ್ತಿ ಪ್ರಾಚಾರ್ಯರು ಅಧ್ಯಕ್ಷಿಯ ನುಡಿಗಳನ್ನು ಹಾಗೂ ಡಾ. ಶಂಭುಲಿಂಗ ಎಸ್.ವಾಣಿ ಮುಖ್ಯಸ್ಥರು ಇತಿಹಾಸ ವಿಭಾಗ ಎರಡನೇಯ ಉಪನ್ಯಾಸದ ಅಧ್ಯಕ್ಷತೆವಹಿಸಿ ಮಾತನಾಡಿದರು. ರವಿ ಮಿಥಿಕ ಸೊಸೈಟಿ ಕುರಿತು ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸಿದರೆ ಡಾ.ಸರ್ವೋದಯ ಶಿವಪುತ್ರ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ, ಡಾ.ಟಿ.ವಿ ಅಡಿವೇಶ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಅನುರಾಧಾ ಮಿಥಿಕ ಸೊಸೈಟಿಯು ಆಡಳಿತ ಮಂಡಳಿಯ ಸದಸ್ಯರು ಜಯಸಿಂಹ ಮಿಥಿಕ ಸಂಸ್ಥೆಯ ಅಧಿಕಾರಿಗಳು, ಡಾ.ಪಂಡಿತ ಬೆಳಮಗಿ, ಪಿ.ಜಿ ವಿಭಾಗದ ಮುಖ್ಯಸ್ಥರು ಡಾ.ಕಲ್ಲಿನಾಥ ಪಾಟೀಲ ಕೆಜಿಸಿಟಿ ವಲಯ ಅಧ್ಯಕ್ಷರು ಡಾ.ಟಿ.ಗುರುಬಸಪ್ಪಾ, ಡಾ.ಮಲ್ಲೇಶಪ್ಪಾ ಕುಂಬಾರ, ಡಾ.ವಿಜಯಲಕ್ಷ್ಮಿ ಬಿರಾದರ, ಡಾ.ಶಾರದಾದೇವಿ ಜಾಧವ, ಡಾ.ಆರ್.ನಾರಾಯಣ, ಡಾ.ಸುರೇಶ ಜಾಧವ, ಡಾ.ವಿಜಯಕುಮಾರ ಸಾಲಿಮನಿ, ಪ್ರೋ.ಚಂದ್ರಶೇಖರ ಅನಾದಿ ಡಾ.ಮಲ್ಲಿಕಾರ್ಜುನ ಶೆಟ್ಟಿ, ಹಾಗೂ ಇತರ ಕಾಲೇಜಿನ ಪ್ರಾಧ್ಯಪಕರು ಹಾಗೂ ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಹಾಗೂ ಕನ್ನಡ ವಿಷಯಗಳ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.