ಕಲಬುರಗಿ:ಸೆ.30:ಭಾರ ತೀಯ ಬೌದ್ಧ ಮಹಾಸಭೆಯ ಮಹಿಳಾ ವಿಭಾಗ ಕಲ್ಬುರ್ಗಿ ವತಿಯಿಂದ ಕಲ್ಬುರ್ಗಿ ನಗರದಲ್ಲಿ ಬಿಎಸ್‍ಐನ ಮಹಿಳಾ ಪದಾಧಿಕಾರಿಗಳಿಗಾಗಿ ಒಂದು ದಿನದ ವಿಶೇಷ ಕೇಡರ್ ಶಿಬಿರವನ್ನು ಆಯೋಜಿಸ ಲಾಗಿತ್ತು. ಕಾರ್ಯಕ್ರಮದ ಪ್ರಾಸ್ತಾವಿ ವಾಗಿ ಮಾತನಾಡಿದ ಭಾರತೀಯ ಬೌದ್ಧ ಮಹಾಸಭೆ ಬೀದರ್ ಜಿಲ್ಲೆ ಅಧ್ಯಕ್ಷರಾದ ಆಯುಷ್ಮಾನ್ ವಿಟ್ಟಲ್ ದಾಸ್ ಪ್ಯಾಗೆ ಅವರು ಮಾತನಾಡುತ್ತಾ ಬಿಎಸ್‍ಐ ಸಂಘಟನೆಯ ಕುರಿತು ವಿವರಿಸುತ್ತಾ ಬಾಬಾ ಸಾಹೇಬರು ಹಾಕಿಕೊಟ್ಟ ಮಾಗ ್ದಲ್ಲಿ ನಾವು ಬೌದ್ಧ ಧರ್ಮದ ಬೆಳವಣಿಗೆ ಬೆಳವಣಿಗೆಗಾಗಿ ನಾವೆಲ್ಲ ಶ್ರಮಿಸಬೇಕಾಗಿದೆ ಅದ ಕ್ಕಾಗಿ ವಿದ್ಯಾವಂತರಾದ ನಾವು ಬಾಬಾ ಸಾಹೇಬರ ಪರಿಶ್ರಮ ದಿಂದ ಈ ಮಟ್ಟಕ್ಕೆ ಬಂದಿರುವ ನಾವು ಅವರ ಋಣವನ್ನು ತೀರಿ ಸಬೇಕಾದರೆ ಬಾಬಾ ಸಾಹೇಬರ ಕನಸು ನನಸು ಮಾಡಲು ನಾವೆಲ್ಲರೂ ಬೌದ್ಧರಾಗುವುದ ರೊಂದಿಗೆ ಆರ್ಥಿಕವಾಗಿ ರಾಜ ಕೀಯವಾಗಿ ಶೈಕ್ಷಣಿಕವಾಗಿ ನಾವು ಎಲ್ಲದರಲ್ಲೂ ಮುಂದೆ ಬರಬೇಕೆಂದು ಅವರು ಹೇಳಿ ದರು ಬಿಎಸ್‍ಐ ಸಂಘಟನೆಯು ಗ್ರಾಮಮಟ್ಟದಿಂದ ರಾಜ್ಯ ಮಟ್ಟದಲ್ಲಿ ಬಲಿಷ್ಠವಾಗಿ ನಾವು ಅದರಲ್ಲಿಯೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಅದ ಕ್ಕಾಗಿಯೇ ಮಹಿಳಾ ಬಿಎಸ್‍ಐ ಸಂಘಟನೆಯನ್ನು ಕೂಡ ನಾವು ಮಾಡಿದ್ದೇವೆ ಅದು ಬಾಬಾ ಸಾಹೇಬರ ಕನಸು ಕೂಡ ಆಗಿತ್ತು ಎಂದರು ಒಂದು ಸಂಘಟನೆ ಬಲಿಷ್ಠವಾಗಬೇಕಾದರೆ ಆರ್ಥಿಕ ನೆರವು ಬೇಕಾಗುತ್ತದೆ ಅದಕ್ಕಾಗಿ ನಾವು ಎಲ್ಲರೂ ಸಂಘದ ಕಾರ್ಯ ಚಟುವಟಿಕೆಗಾಗಿ ಒಂ ದು ನೂರು ರೂಪಾಯಿ ಕೊಟ್ಟು ಸಂಘದ ಸದಸ್ಯರಾದರೆ ಗ್ರಾಮ ಮಟ್ಟದಿಂದ ರಾಜ್ಯದ ಮಟ್ಟದ ವರೆಗೆ ಈ ಹಣವನ್ನು ಸಂಘಟ ನೆಗಾಗಿ ಖರ್ಚು ಮಾಡಲಾ ಗುತ್ತದೆ ಮತ್ತು ಈ ಹಣದಿಂದ ಸಂಘಟನೆಗೆ ಬಲ ಬರುತ್ತದೆ ಅದಕ್ಕಾಗಿ ಮತ್ತೆ ನಾವು ಭಾರತ ದಲ್ಲಿ ಬೌದ್ಧ ಧರ್ಮ ಮರು ಸ್ಥಾಪನೆ ಮಾಡುವುದರೊಂದಿಗೆ ನಾವು ಪ್ರಬುದ್ಧ ಭಾರತ ಕಡೆಗೆ ನಡೆಯಬೇಕು ಎಂದು ಹೇಳಿ ದರು. ಉದ್ಘಾಟಕರಾಗಿ ಬುದ್ಧ ಲೋಕ ಪತ್ರಿಕೆಯ ಸಂಪಾದಕ ರಾದ ದೇವೇಂದ್ರಪ್ಪ ಕಪನೂರು’ ಮುಖ್ಯ ಅತಿಥಿಗಳಾಗಿ ಮನೋ ಹ ಮೋರೆ, ಅಧ್ಯಕ್ಷರು, ಬಿಎಸ್‍ಐ, ಉತ್ತರ ಕರ್ನಾಟಕ ಇವರು ಆಗಮಿಸಿದ್ದರು. ತರ ಬೇತುದಾರರಾಗಿ ಬಿಎಸ್‍ಐನ ಕೇಂದ್ರ ಮಹಿಳಾ ಶಿಕ್ಷಕಿ, ವೈಶಾ ಲಿ ಮೋರೆ ಆಗಮಿಸಿ ದ್ದರು. ಬಿಎಸ್‍ಐನ ವಿಠಲದಾಸ ಪ್ಯಾಗೆ ಅವರು ಪ್ರಾಸ್ತಾವಿಕ ಮಾತನಾ ಡಿದರು. ಸಿದ್ದಾರ್ಥ ಚಿಮ್ಮಾಇ ದ್ಲಾಯಿ ಅವರು ಭೀಮಗೀತೆ ಯೊಂದಿಗೆ ಸ್ವಾಗತ ಕೋರಿದರು, ಡಾ.ಪುಟ್ಟಮಣಿ ದೇವಿದಾಸ ಅವರು ಅಧ್ಯಕ್ಷತೆಯನ್ನು ವಹಿ ಸಿದ್ದರು. ಕಾರ್ಯಕ್ರಮದಲ್ಲಿ ಬಿಎಸ್‍ಐನ ಉತ್ತರ ರಾಜ್ಯ ಘಟಕದ ದೇವೇಂದ್ರ ಭಾಲ್ಕೆ, ಸೇವಂತಾ, ಗೌತಮಿ ಹಿರೋಳಿ, ಕಲ್ಬುರ್ಗಿಯ ಜಿಲ್ಲಾಧ್ಯಕ್ಷರಾದ ನಾಗಪ್ಪ ಹೋಳ್ಕರ್, ಸಮತಾ ಸೈನಿಕ ದಳದ ಉಪಾಧ್ಯಕ್ಷರಾದ ಪುಂಡಲೀಕ ಹೆರೂರು, ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಗುಂಡುರಾವ್ ಅವರು ಮತ್ತು ಬಹು ಸಂಖ್ಯೆಯಲ್ಲಿ ಬೌದ್ಧ ಉಪಸಕರು ಉಪಸ್ಥಿತರಿದ್ದರು