
ಕಲಬುರಗಿ,ಮೇ.11:ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಬುಧವಾರ ಒಂಭತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿದ ಮತದಾನದಲ್ಲಿ ಜಿಲ್ಲೆಯಲ್ಲಿರುವ ಒಟ್ಟಾರೆ 22,18,055 ಮತದಾರರ ಪೈಕಿ 14,73,533 ಮತದಾರರು ಮತ ಚಲಾಯಿಸಿದ್ದು ಶೇ.66.43 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಜಿಲ್ಲೆಯ ಸೇಡಂ ಕ್ಷೇತ್ರದಲ್ಲಿ ಗರಿಷ್ಠ ಶೇ.77.59 ಮತ್ತು ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಕನಿಷ್ಠ ಶೇ.56.32 ರಷ್ಟು ಮತದಾನವಾಗಿದ್ದು, ವಿಧಾನಸಭಾ ಕ್ಷೇತ್ರವಾರು ಮತದಾರರು ಮತ ಚಲಾವಣೆಯ ಅಂಕಿ ಸಂಖ್ಯೆ ವಿವರ ಇಂತಿದೆ:
34 ಅಫಜಲಪೂರ: 1,17,230 ಪುರುಷರು, 1,10,806 ಮಹಿಳೆಯರು ಹಾಗೂ 21 ಇತರೆ ಸೇರಿ 2,28,057 ಮತದಾರರ ಪೈಕಿ 83,499 ಪುರುಷರು, 75,977 ಮಹಿಳೆಯರು ಹಾಗೂ ಇತರೆ 2 ಸೇರಿ ಒಟ್ಟು 1,59,478 ಜನ ಮತ ಚಲಾಯಿಸಿದ್ದು, ಶೇ.69.93 ರಷ್ಟು ಮತದಾನವಾಗಿದೆ.
35-ಜೇವರ್ಗಿ: 1,21,727 ಪುರುಷರು, 1,18,122 ಮಹಿಳೆಯರು ಹಾಗೂ 28 ಇತರೆ ಸೇರಿ 2,39,877 ಮತದಾರ ಪೈಕಿ 86,876 ಪುರುಷರು, 79,943 ಮಹಿಳೆಯರು ಹಾಗೂ 3 ಇತರೆ ಸೇರಿ 1,66,822 ಜನ ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಶೇ.69.54 ರಷ್ಟು ಮತದಾನವಾಗಿದೆ.
36-ಚಿತ್ತಾಪುರ: 1,18,082 ಪುರುಷರು, 1,17,630 ಮಹಿಳೆಯರು ಹಾಗೂ 11 ಸೇರಿ ಒಟ್ಟು 2,35,723 ಮತದಾರರಲ್ಲಿ 77,761 ಪುರುಷರು, 74,954 ಮಹಿಳೆಯರು ಹಾಗೂ ಇತರೆ 3 ಸೇರಿ ಒಟ್ಟು 1,52,718 ಜನ ಮತದಾನ ಮಾಡಿದ್ದು, ಶೇ.64.79 ರಷ್ಟು ಮತದಾನ ಪ್ರಮಾಣ ವರದಿಯಾಗಿದೆ.
41-ಸೇಡಂ: 1,11,530 ಪುರುಷರು, 1,14,085 ಮಹಿಳೆಯರು ಹಾಗೂ 30 ಇತರೆ ಸೇರಿ 2,25,645 ಮತದಾರರ ಪೈಕಿ 88,074 ಪುರುಷರು, 87,000 ಮಹಿಳೆಯರು ಹಾಗೂ ಇತರೆ 1 ಸೇರಿ 1,75,075 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.77.59 ರಷ್ಟು ಮತದಾನವಾಗಿದೆ.
42-ಚಿಂಚೋಳಿ: 1,03,757 ಪುರುಷರು, 99,736 ಮಹಿಳೆಯರು ಹಾಗೂ 15 ಇತರೆ ಸೇರಿ 2,03,508 ಮತದಾರರಿದ್ದು, ಇದರಲ್ಲಿ 76,355 ಪುರುಷರು ಮತ್ತು 72,821 ಮಹಿಳೆಯರು ಸೇರಿ ಒಟ್ಟು 1,49,176 ಜನ ಮತ ಚಲಾವಣೆ ಮಾಡಿದ್ದು, ಶೇ.73.30 ರಷ್ಟು ಮತದಾನವಾಗಿದೆ.
43-ಗುಲಬರ್ಗಾ ಗ್ರಾಮೀಣ: 1,32,276 ಪುರುಷರು, 1,25,229 ಮಹಿಳೆಯರು ಹಾಗೂ ಇತರೆ 36 ಸೇರಿ 2,57,541 ಮತದಾರರಲ್ಲಿ 83,590 ಪುರುಷರು, 77,237 ಮಹಿಳೆಯರು ಹಾಗೂ ಇತರೆ 3 ಸೇರಿ ಒಟ್ಟು 1,60,830 ಜನ ಮತ ಚಲಾಯಿಸಿದ್ದು, ಶೇ.62.45 ರಷ್ಟು ಮತದಾನವಾಗಿದೆ.
44-ಗುಲಬರ್ಗಾ ದಕ್ಷಿಣ: 1,38,442 ಪುರುಷರು, 1,40,669 ಮಹಿಳೆಯರು ಹಾಗೂ ಇತರೆ 56 ಸೇರಿ 2,79,167 ಮತದಾರರ ಪೈಕಿ 79,192 ಪುರುಷರು, 78,037 ಮಹಿಳೆಯರು ಹಾಗೂ ಇತರೆ 6 ಸೇರಿ 1,57,235 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ.56.32 ರಷ್ಟು ಮತದಾನವಾಗಿದೆ.
45-ಗುಲಬರ್ಗಾ ಉತ್ತರ: 1,52,958 ಪುರುಷರು, 1,54,003 ಮಹಿಳೆಯರು ಹಾಗೂ ಇತರೆ 98 ಸೇರಿ 3,07,059 ಮತದಾರರಲ್ಲಿ 90,849 ಪುರುಷರು, 86,781 ಮಹಿಳೆಯರು ಹಾಗೂ ಇತರೆ 7 ಸೇರಿ ಒಟ್ಟು 1,77,637 ಜನ ಮತ ಚಲಾವಣೆ ಮಾಡಿದ್ದು, ಶೇ.57.85 ರಷ್ಟು ಮತದಾನವಾಗಿದೆ.
46-ಆಳಂದ: 1,25,970 ಪುರುಷರು, 1,15,474 ಮಹಿಳೆಯರು ಹಾಗೂ 34 ಇತರೆ ಸೇರಿ 2,41,478 ಮತದಾರರ ಪೈಕಿ 92,040 ಪುರುಷರು ಮತ್ತು 82,519 ಮಹಿಳೆಯರು ಹಾಗೂ 3 ಇತರೆ ಸೇರಿ ಒಟ್ಟು 1,74,562 ಜನ ಮತ ಚಲಾಯಿಸಿದ್ದು, ಶೇ.72.29 ರಷ್ಟು ಮತದಾನವಾಗಿದೆ.