ಕಲಬುರಗಿ,ಮಾ.27: ಕಲಬುರಗಿ ನಗರದಲ್ಲಿ ನಾಲ್ಕು ಆಯುಷ್ಮತಿ ಕ್ಲಿನಿಕ್‍ಗಳು ಸ್ಥಾಪಿಸಲಾಗಿದ್ದು ,ಕಲಬುರಗಿ ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಗರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶ್ರೀ ದತ್ತಾತ್ರೇಯ ಸಿ ಪಾಟೀಲ ರೇವೂರ , ಜಿಲ್ಲಾಧಿಕಾರಿಗಳಾದ ಯಶವಂತ ವಿ ಗುರುಕರ್ ಹಾಗೂ ಪರ್ವತಿ ಮತ್ತು ಚಂದ್ರಕಲಾ ಫಲಾನುಭವಿಗಳಿಂದ ಆಯುಷ್ಮತಿ ಕ್ಲಿನಿಕ್ ಜಂಟಿಯಾಗಿ ಇಂದು ಉದ್ಘಾಟಿಸಿದರು.
ಆಯುಷ್ಮತಿ ಕ್ಲಿನಿಕ್ ಚಿಕ್ಕಬಳ್ಳಾಪೂರದಿಂದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದದ ಮೂಲಕ ರಾಜ್ಯಾದ್ಯಂತ ಆಯುಷ್ಮತಿ ಕ್ಲಿನಿಕ್‍ಗಳನ್ನು ಸಾಂಕೇತವಾಗಿ ಉದ್ಘಾಟಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜಶೇಖರ ಮಾಲಿ ಅವರು ಮಾತನಾಡಿ, ಈಗಾಗಲೇ ನಾಲ್ಕು ಆಯುಷ್ಮತಿ ಕ್ಲಿನಿಕಗಳನ್ನು ಅಶೋಕ ನಗರ ಶಿವಾಜಿ ನಗರ,ಎನ್.ಆರ್.ನಗರ, ಮಾಣಿಕೇಶ್ವರ ನಗರ ಕ್ಲಿನಿಕ್‍ಗಳ ಸೇವೆಗಳು ಒದಗಿಸಲಾಗಿದೆ ಎಂದರು.
ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿದ್ದು ಇದರ ಪ್ರಯೋಜ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು.
ಹದಿಹರೆಯದವರಿಗೆ ದೈಹಿಕ ಬದಲಾವಣೆ ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದರÀ ಆಪ್ತ ಸಮಾಲೋಚನೆ ನಡೆಸಲಾಗುವುದು ಯಾವುದೇ ರೋಗವನ್ನು ಬೇಗನೆ ಗುಣಪಡಿಸಲಾಗುತ್ತಿದೆ ಯಾರು ಭಯಪಡುವ ಅಗತ್ಯವಿಲ್ಲ ಎಂದರು.
ಸ್ತ್ರೀರೋಗ ತ್ಜಷರು, ಮೂಳೆ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಫಿಸಿಷಿಯನ್, ಮಾನಸಿಕ ರೋಗ ತಜ್ಞರು, ಕಿವಿ ಮತ್ತು ಗಂಟಲು ಇತ್ಯಾದಿ ಅವಶ್ಯಕತೆಗೆನುಗಣವಾಗಿ ಆಪ್ತ ಸಮಾಲೋಚನೆ ಸೇವೆಗಳಾದ ಖುತುಚಕ್ರ ಸಂಬಂಧಿ ಹಾಗೂ ಖುತುಚಕ್ರ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು ಸಂತಾನೋತ್ಪತ್ತಿ, ಹದಿಹರೆಯದವರ ಸಮಸೆಗಳು ಮುಟ್ಟುನಿಲುವ ಸಮಯದ ಸಮಸ್ಯೆಗಳು ಪೌಷ್ಟಿಕಾಂಶ ಕೊರತೆÀ ಜೀವನ ಶೈಲಿ ಸುಧಾರಣೆ ಇತ್ಯಾಧಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ವಿಭಾಗಿಯ ಜಂಟಿ ನಿರ್ದೇಶಕರಾದ ಡಾ|| ಮೈಲಾರೆ ಸಹನಿರ್ದೇಶಕರಾದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಪ್ರಭುಲಿಂಗ ಮಾನಕರ್ ಡಾ|| ಶರಣಬಸಪ್ಪ ಗಣಜಲಖೇಡ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಶರಣಬಸಪ್ಪ ಕ್ಯಾತನಾಳ ಜಿಲ್ಲಾ ಕುಷ್ಠರೋಗ ಅಧಿಕಾರಿಗಳಾದ ಡಾ|| ರಾಜಕುಮಾರ ಕುಲಕರ್ಣಿ ತಾಲೂಕಾ ಆರೋಗ್ಯ ಅಧಿಕಾರಿಗಳು ಡಾ|| ಮಾರುತಿ ಕಾಂಬ್ಳೆ, ನಗರ ಕಾರ್ಯಕ್ರಮ ವೈದ್ಯಾಧಿಕಾರಿಗಳಾದ ಡಾ|| ಬಾಬುರಾವ್ ಚವ್ಹಾಣ ಹಾಗೂ ವ್ಯವಸ್ಥಾಪಕರಾದ ಶ್ರೀ ಶ್ರೀಕಾಂತ ಸ್ವಾಮಿ, ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.