ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನಪರಿಸ್ಥಿತಿ

ಕಲಬುರಗಿ:ಏ.25: ಕಲಬುರಗಿ ಜಿಲ್ಲೆಯಲ್ಲಿ 11 ತಾಲೂಕುಗಳಾದ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಕಾಳಗಿ ಶಹಾಬಾದ, ಕಮಲಾಪೂರ, ಜೇವರ್ಗಿ ಯಡ್ರಾಮಿ ಮತ್ತು ಸೇಡಂ ತಾಲೂಕು ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯತಿಗಳಿದ್ದು, ಇದರಲ್ಲಿ 854 ಗ್ರಾಮಗಳು, 1258 ಜನವಸತಿಗಳಿದ್ದು, 456036 ಮನೆಗಳು ಸಂಖ್ಯೆ 21,33,196 ಜನಸಂಖ್ಯೆ ಹೊಂದಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್‍ಸಿಂಗ್ ಮೀನಾ ಅವರು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 385 ಗ್ರಾಮಗಳು ನೀರಿನ ಕೊರತೆ ಎದುರಿಸುವ ಸಾಧ್ಯತೆಯಿದ್ದು, ಕಲಬುರಗಿ ತಾಲೂಕಿನಲ್ಲಿ 54 ಗ್ರಾಮಗಳು ನೀರಿನ ಕೊರತೆ ಎದುರಿಸುವ ಸಾಧ್ಯತೆಯಿದ್ದು, ಆಳಂದ ತಾಲೂಕಿನ 85 ಗ್ರಾಮಗಳು ಚಿಂಚೋಳಿ ತಾಲೂಕಿನ 21 ಗ್ರಾಮಗಳು, ಅಫಜಲಪೂರು ತಾಲೂಕಿನ 115 ಗ್ರಾಮಗಳಿವೆ. ಜೇವರ್ಗಿ ತಾಲೂಕಿನ 5 ಗ್ರಾಮಗಳು, ಚಿತ್ತಾಪೂರದ 14 ಗ್ರಾಮಗಳು, ಶಹಾಬಾದ ತಾಲೂಕಿನ 5 ಗ್ರಾಮಗಳು, ಕಾಳಗಿ ತಾಲೂಕಿನ 16 ಗ್ರಾಮಗಳು, ಯಡ್ರಾಮಿ ತಾಲೂಕಿನ 8 ಗ್ರಾಮಗಳು ಮತ್ತು ಕಮಲಾಪೂರ ತಾಲೂಕಿನ 23 ಗ್ರಾಮಗಳು ಹಾಗೂ ಸೇಡಂ ತಾಲೂಕಿನ 39 ಗ್ರಾಮಗಳು ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉದ್ಭವಿಸುವ ಗ್ರಾಮಗಳನ್ನು ಗುರುತಿಸಲಾಗಿದೆ ತಿಳಿಸಿದ್ದಾರೆ.
ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾರವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮತ್ತು ಉಪ ವಿಭಾಗಗಳ ಅಧಿಕಾರಿಗಳೊಂದಿಗೆ ಸತತವಾಗಿ ಸಭೆ ಮಾಡುವುದರ ಜೊತೆಗೆ ಎಲ್ಲಾ ತಾಲೂಕಿಗೆ ಕ್ಷೇತ್ರ ಭೇಟಿ ಮಾಡುವ ಮೂಲಕ ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಅಲ್ಲದೇ ಜಿಲ್ಲೆಯಲ್ಲಿ ಒಟ್ಟು 313 ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿದೆ. ಅಗತ್ಯವಿದ್ದಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಜಿಲ್ಲಾಡಳಿತವು 33 ಟ್ಯಾಂಕರಗಳ ಟೆಂಡರ್‍ಗಳನ್ನು ಕರೆಯಲಾಗಿದ್ದು, ಟ್ಯಾಂಕರಗಳ ಮೂಲಕ ನೀರು ಸರಬುರಾಜು ಮಾಡಲಾಗುವುದು. ಈಗಾಗಲೇ ವಿಭಾಗದಲ್ಲಿ 9000 ಲೀಟರ ರ್ಸಾಮಥ್ರ್ಯವುಳ್ಳ 7 ಟ್ಯಾಂಕರಗಳಿದ್ದು, ಈಗಾಗಲೇ ಆಳಂದ ತಾಲೂಕಿಗೆ 2, ಅಫಜಲಪೂರ ತಾಲೂಕಿಗೆ 2, ಕಲಬುರಗಿ ತಾಲೂಕಿಗೆ 1 ಮತ್ತು ಜೇವರ್ಗಿ ತಾಲೂಕಿಗೆ 1 ಒಟ್ಟು 6 ಟ್ಯಾಂಕರಗಳನ್ನು ತಾಲೂಕಿನ ಕಛೇರಿಗಳಿಗೆ ಹಸ್ತಾಂತರಿಸಲಾಗಿದೆ. ನೀರಿನ ಕೊರತೆ ಕಂಡುಬಂದ ಗ್ರಾಮಗಳಿಗೆ ಟ್ಯಾಂಕರ ಮೂಲಕ ನೀರು ಸರಬುರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ವಾರ್ಷಿಕ ತಾಪಮಾನವು 33 ಡಿಗ್ರಿ ಸೆಲಿಸಿಯಸ್ ಆಗಿದೆ. ಕಲಬುರಗಿಯು ಸಾಮಾನ್ಯವಾಗಿ ಸುಮಾರು 104.74 ಮಿಲಿ ಮೀಟರ (4.12 ಇಂಚುಗಳು) ಮಳೆಯನ್ನು ಪಡೆಯುತ್ತದೆ. ಆದರೆ ಈ ವರ್ಷವಾಡಿಕೆಯಂತೆ ಮಳೆ ಆಗದೇ ಇರುವುದರಿಂದ, ಸತತ 2001 ರಿಂದ 23 ವರ್ಷಗಳಲ್ಲಿ 16 ವರ್ಷಗಳು ತೀವ್ರ ಬರಪರಿಸ್ಥಿತಿ ಎದುರಿಸುತ್ತಿರುವುದರಿಂದ ಅಂತರ್ಜಲಮಟ್ಟ ಕುಸಿದಿದೆ. ವಿವರಕೆಳಗಿನಂತಿರುತ್ತದೆ
2023-24ನೇಸಾಲಿನ ಮುಂಬುರವ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ವಿವರ.
ಅಫಜಲಪೂರ, ಆಳಂದ ಮತ್ತು ಕಲಬುರಗಿ ಗ್ರಾಮೀಣ, ಚಿಂಚೋಳಿ, ಚಿತ್ತಾಪೂರ, ಕಲಬುರಗಿ, ಜೇವರ್ಗಿ, ಸೇಡಂ, ಕಮಲಾಪುರ, ಯಡ್ರಾಮಿ, ಶಹಾಬಾದ ಸೇರಿದಂತೆ ಒಟ್ಟು ಗ್ರಾಮಗಳ ಸಂಖ್ಯೆ 385, ಕೊಳವೆ ಬಾವಿಗಳ ಸಂಖ್ಯೆ, 2053, ಒಟ್ಟು ಕಾರ್ಯನಿರ್ವಹಿಸುತ್ತಿರುವ ಕೊಳವೆ ಬಾವಿಗಳ ಸಂಖ್ಯೆ 1390, ಸ್ಥಗತಗೊಂಡಿರುವ ಬಾವಿಗಳ ಸಂಖ್ಯೆ 658, ಕೊಳವೆ ಬಾವಿಗಳನ್ನು ಸ್ವಚ್ಫಗೊಳಿಸಲಿರುವ ಮತ್ತು ಆಳಗೊಳಿಸಲಿರುವ ಸಂಖ್ಯೆ 680, ಗುರುತಿಸಲಾದ ಖಾಸಗಿ ಕೊಳವೆ ಬಾವಿಗಳ ಸಂಖ್ಯೆ 313, ಒಟ್ಟು ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಯಿಸುತ್ತಿರುವ ಗ್ರಾಮಗಳ ಸಂಖ್ಯೆ 131 ಇರುತ್ತವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,