ಕಲಬುರಗಿ ಜಿಲ್ಲಾಡಳಿತಕ್ಕೆ 10 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ನೀಡಿದ ವಿಜಯಪೂರ ಮೂಲದ ಟ್ರಸ್ಟ್

ಕಲಬುರಗಿ.ಮೇ.16: ಕೋವಿಡ್ ಹಿನ್ನೆಲೆಯಲ್ಲಿ ವಿಜಯಪುರ ಮೂಲದ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ನಿಂದ ರೋಗಿಗಳ ಚಿಕಿತ್ಸೆಗೆ ಅವಶ್ಯವಿರುವ 1 ಲೀಟರ್ ಸಾಮರ್ಥ್ಯದ 10 ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ರವಿವಾರ ಕಲಬುರಗಿ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದರು.

ಟ್ರಸ್ಟ್ ಪ್ರತಿನಿಧಿ ವೀರೇಶ ಎಸ್.ಡಿ. ಅವರು ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರಿಗೆ ಕಾನ್ಸೆಂಟ್ರೇಟರ್‌ಗಳನ್ನು ಹಸ್ತಾಂತರಿಸಿದರು.