ಕಲಬುರಗಿ ಗೃಹರಕ್ಷಕ ದಳಕ್ಕೆ ಹಂಚಿಕೆಯಾದ ಬೋಟ್ ಸೇರಿದಂತೆ ಮತ್ತಿತರ ಸಾಮಗ್ರಿ ಪರಿವೀಕ್ಷಣೆ

ಕಲಬುರಗಿ.ಜೂ.1:ಮಳೆಗಾಲದ ಸೇರಿದಂತೆ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರಿನ ಕೇಂದ್ರ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿ ಕಚೇರಿಯಿಂದ ಕಲಬುರಗಿ ಜಿಲ್ಲಾ ಗೃಹರಕ್ಷಕ ದಳಕ್ಕೆ ಹಂಚಿಕೆಯಾದ ಒಂದು ಬೋಟು, ಮೋಟರ್, ಲೈಫ್‍ಬಾಯ್ (ಲೈಫ್ ಬೆಲ್ಟ್), 10 ಲೈಫ್ ಜಾಕೇಟ್, ಪ್ರಥಮ ಚಿಕ್ಸಿತೆ ಕಿಟ್ ಹಾಗೂ ಇನ್ನಿತರ ಪರಿಕರ ಸಾಮಾಗ್ರಿಗಳನ್ನು ಕಲಬುರಗಿ ಜಿಲ್ಲಾ ಸಮಾದೇಷ್ಟರಾದ ಸಂತೋಷ್‍ಕುಮಾರ ಪಾಟೀಲ್ ಅವರ ಸಮ್ಮುಖದಲ್ಲಿ ಕಲಬುರಗಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಮಹೇಶ್ ಹಾಗೂ ಜಿಲ್ಲಾ ಅಗ್ನಿಶಾಮತ ಅಧಿಕಾರಿ ಪರಶುರಾಮ್ ಅವರು ಮಂಗಳವಾರ ಪರಿವೀಕ್ಷಣೆ ನಡೆಸಿದರು.
ಅವರು ಈ ಸಂದರ್ಭದಲ್ಲಿ ಮಾತನಾಡಿ, ಗೃಹರಕ್ಷಕರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದಲ್ಲದೇ ಪ್ರವಾಹ ಉಂಟಾದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಸನ್ನದ್ಧರಿರಬೇಕೆಂದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಗೃಹರಕ್ಷಕದಳದ ಅಧಿಕಾರಿಗಳಾದ ವಿಜಯ್ ಗೋಡಬೊಲೆ, ಚಂದ್ರಕಾಂತ್ ಹಾವನೂರ, ಸಿಬ್ಬಂದಿಗಳಾದ ಸಂತೋಷ್, ಮಹೇಂದ್ರಕುಮಾರ್ ಹಾಗೂ ಗೃಹರಕ್ಷಕರಾದ ರಾಮನಗೌಡ, ಪ್ರಶಾಂತ, ವಿಠ್ಠಲ, ಮಲ್ಲಾರಾವ್, ಹಣಮಂತ, ಮಲ್ಲೇಶಿ, ಸೋಮಶೇಖರ, ಪ್ರಶಾಂತ, ಬಸವರಾಜ ಹಾಗೂ ಪೀರಪ್ಪ ಉಪಸ್ಥಿತರಿದ್ದರು.