ಕಲಬುರಗಿ: ಕ್ರಿಸ್ತನಿಗಾಗಿ ಓಟ

ಕಲಬುರಗಿ,ಏ.8-ಕ್ರಿಸ್ತನ ಪುನರುತ್ಥಾನ ಮತ್ತು ಐಕ್ಯತೆಗಾಗಿ ಕ್ರೈಸ್ತ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ವತಿಯಿಂದ ನಗರದ ಸಮಸ್ತ ಕ್ರೈಸ್ತ ಸಮುದಾಯದವರು ನಗರದಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ 9.30ರವರೆಗೆ ” ಕ್ರಿಸ್ತನಿಗಾಗಿ ಓಟ” ಎಂಬ ಮೆರವಣಿಗೆ ನಡೆಸಿದರು.
ಬಿಷಪ್ ಮೈಕಲ್ ಮಿರಾಂಡ್, ಘನ. ಡೇವಿಡ್ ನೇತಾನಿಯಲ್, ಯುವ ನಾಕಯರಾದ ವಿಜಯಕುಮಾರ ಕೋರಿ, ದಿನೇಶ ಕೋಬಾಳಕರ್, ಸುಧಾಕರ ಮತ್ತು ಕ್ರೈಸ್ತ್ ಕಾರ್ಯದರ್ಶಿ ಸಿಮೆಯೋನ್ ಸಾಮುವೇಲ್, ಕ್ರಿಸ್ತ್ ನಾಯಕರಾದ ಗುರುಪ್ರಸಾದ, ಸೂರ್ಯಕುಮಾರ ಅವರ ನೇತೃತ್ವದಲ್ಲಿ ನಗರದ ಸುಪರ್ ಮಾರ್ಕೆಟ್‍ನ ಜತನಾ ಬಜಾರ್‍ದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಕ್ರೈಸ್ತ್ ಸಮುದಾಯದ ಧರ್ಮಗುರುಗಳು, ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.