ಕಲಬುರಗಿ ಕೀರ್ತಿ ಹೆಚ್ಚಿಸಿದ ಡಾ. ಮಲ್ಲಿಕಾರ್ಜುನ ಖರ್ಗೆ: ಅರುಣಕುಮಾರ ಪಾಟೀಲ

ಕಲಬುರಗಿ : ಜು.22: ಹಲವಾರು ಯೋಜನೆಗಳನ್ನು ಕಲಬುರಗಿ ಜಿಲ್ಲೆಗೆ ತಂದು ಅಭಿವೃದ್ಧಿ ಮಾಡುವುದರ ಮೂಲಕ ಕಲಬುರಗಿ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ಡಾ. ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಜಿ. ಪಂ. ಸದಸ್ಯರಾದ ಅರುಣಕುಮಾರ ಎಂ. ಪಾಟೀಲ ಅವರು ಹೇಳಿದರು.

ದೇಹಲಿಯಲ್ಲಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಭೇಟಿಯಾಗಿ ಹೂಗುಚ್ಚ ನೀಡಿ ಜನ್ಮದಿನದ ಶುಭಾಷಯಗಳು ಕೋರಿ ಮಾತನಾಡಿದ ಅವರು,
ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ದೇಶ ಕಂಡ ಅಪ್ರತಿಮ ನಾಯಕರು, ನಮ್ಮಂಥ ನೂರಾರು ಯುವಜನಾಂಗಕ್ಕೆ ರಾಜಕೀಯ ಗುರುಗಳಾಗಿ ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಾಟೀಲ ಅಭಿಪ್ರಾಯ ಪಟ್ಟರು.

ಮುಂದಿನ ದಿನಗಳಲ್ಲಿ ದೇಶದ ಅತ್ಯುನ್ನತ ಸ್ಥಾನ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೊರಕಲು ದೇವರು ಹೆಚ್ಚಿನ ಆಯುಷ್ಯ ನೀಡಿ ನಾಡಿನ ಸೇವೆಮಾಡುವ ಶಕ್ತಿ ಒದಗಿಸಲೆಂದು ಶುಭಹಾರೈಸಿ ಭವಿಷ್ಯದಲ್ಲಿ ಇನ್ನೂ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಜನ್ಮದಿನದ ಶುಭ ಹಾರೈಸಿರುವುದಾಗಿ ಪಾಟೀಲ ತಿಳಿಸಿದರು.