ಕಲಬುರಗಿ ಕಲಾವಿದರಿಗೆ ಶ್ರೀ ದರ್ಶಿನಿ ಕಲೈಕೂಡಂ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ಆ.21:ಕಲಬುರಗಿಯ ಕಲಾವಿದರಾದ ರೆಹಮಾನ್ ಪಟೇಲ್ ಮತ್ತು ಮಹಮ್ಮದ್ ಅಯಾಜುದ್ದೀನ್ ಪಟೇಲ್ ಅವರಿಗೆ ಚೆನ್ನೈ ಮೂಲದ ಶ್ರೀ ಧರ್ಷಿಣಿ ಕಲೈಕೂಡಂ ಅವರು 19ನೇ ವಾರ್ಷಿಕ ರಾಷ್ಟ್ರೀಯ ಕಲಾ ಪ್ರದರ್ಶನ ಪ್ರಶಸ್ತಿಯನ್ನು ಆಗಸ್ಟ್ 13 ರಂದು ಚೆನ್ನೈನ ಇನ್ಫೋಸಿಸ್ ಸಭಾಂಗಣದಲ್ಲಿ ಪ್ರದಾನ ಮಾಡಿದರು.

ಶಾಸಕ ಜೆ.ಕರುಣಾನಿಧಿ, ಕಲಾ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಬಿ.ಹೇಮನಾಥನ್, ಚಲನಚಿತ್ರ ನಿರ್ದೇಶಕ ಮೋಹನ್.ಜಿ., ಉದ್ಯಮಿ ಅನಿಲ್ಕುಮಾರ್ ರೆಡ್ಡಿ ಅವರು ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯು ಕಲಾವಿದರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿತು. ಶ್ರೀ ದರ್ಶಿನಿ ಕಲೈಕೂಡಂ ಸಂಸ್ಥಾಪಕ ಡಿ ಧರ್ಮಲಿಂಗಂ ಉಪಸ್ಥಿತರಿದ್ದರು.

ರೆಹಮಾನ್ ಪಟೇಲ್ ಮತ್ತು ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ತಮ್ಮ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಪ್ರಸ್ತುತ ಸಮಸ್ಯೆಗಳನ್ನು ಪ್ರದರ್ಶಿಸಲು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲು ಹೆಸರುವಾಸಿಯಾಗಿದ್ದಾರೆ.