ಕಲಬುರಗಿ ಎರಡನೇ ರಿಂಗ್ ರಸ್ತೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಡಾ. ಜಾಧವ

ಕಲಬುರಗಿ,ಜು.21: ಕಲಬುರಗಿ ನಗರವು ಈಗಿರುವ ವರ್ತುಲ ರಸ್ತೆಯನ್ನು ಮೀರಿ ಬೆಳೆದಿದೆ ಎಂದು ಲೋಕಸಭೆಯಲ್ಲಿ ಕಲಬುರ್ಗಿ ಎರಡನೇ ವರ್ತುಲ ರಸ್ತೆ ಬಗ್ಗೆ ಪ್ರಸ್ತಾಪಿಸಿ ಕಲಬುರ್ಗಿ ಸಂಸದ ಡಾಕ್ಟರ್ ಉಮೇಶ್ ಜಾಧವ್ ಅವರು ಮಾತನಾಡಿದರು.

NH-150E, NH-50 ಮತ್ತು NH-150 ನಲ್ಲಿ ಟ್ರಾಫಿಕ್ ತುಂಬಾ ಹೆಚ್ಚಾಗಿದೆ. ಕಲಬುರಗಿ ನಗರದ ಸಂಚಾರ ದಟ್ಟಣೆಯಿಂದಾಗಿ ದಿನೇದಿನೇ ದುರ್ಘಟನೆಗಳು ಹೆಚ್ಚಾಗುತ್ತಿದೆ ಹಾಗೆಯೇ ಸಂಚಾರಕ್ಕು ಕೂಡ ಸಮಯ ಹೆಚ್ಚಿಸುತ್ತಿದೆ ಆದ್ದರಿಂದ ಸುರಕ್ಷಿತ, ಸುಗಮ ಮತ್ತು ದಟ್ಟಣೆ ಮುಕ್ತ ಸಂಚಾರಕ್ಕಾಗಿ ಹೊಸ ಬೈಪಾಸ್ ಅಗತ್ಯವಿದೆ ಎಂದು ನುಡಿದರು.

ಬೈಪಾಸ್‌ನ ಉದ್ದೇಶಿತ ಉದ್ದವು 41.43Km ಆಗಿದ್ದು, NH-150E Km 0.00 (ಗುಲ್ಬರ್ಗಾ-ಅಫಜಲಪುರ ವಿಭಾಗ) ಜಂಕ್ಷನ್‌ನಲ್ಲಿ ಆರಂಭಗೊಂಡು NH-50 (ಗುಲ್ಬರ್ಗಾ-ಜೇವರ್ಗಿ ವಿಭಾಗ) ಜೊತೆಗೆ Km 41.43 ರಲ್ಲಿ ಕೊನೆಗೊಳ್ಳುತ್ತದೆ.

ಪ್ರಸ್ತಾವಿತ ಬೈಪಾಸ್ ಸುಸಜ್ಜಿತ ನಾಲ್ಕು ಲೇನ್ ಹೆದ್ದಾರಿ ಆಗಿದೆ. NH-150E ಮತ್ತು NH-50 ಅನ್ನು NH-150 ಮೂಲಕ ಸಂಪರ್ಕಿಸುವ ಜೋಡಣೆಯನ್ನು ಈಗಾಗಲೇ ಸಚಿವಾಲಯವು 14.02.2017 ರಂದು ಅನುಮೋದಿಸಿದೆ ಮತ್ತು 09.01.2019 ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾದ 3(a) ಅಧಿಸೂಚನೆಯನ್ನು ಅನುಮೋದಿಸಿದೆ.

ಈ ಉದ್ದೇಶಿತ ಬೈಪಾಸ್‌ಗೆ NH ಘೋಷಣೆಯನ್ನು ಸಚಿವಾಲಯದಿಂದ ನಿರೀಕ್ಷಿಸಲಾಗಿದೆ ಅಂದರೆ ಸಚಿವಾಲಯದ ಯೋಜನಾ ವಿಭಾಗದಲ್ಲಿ ಬಾಕಿ ಉಳಿದಿದೆ ಮತ್ತು ಪ್ರಸ್ತುತ ವಾರ್ಷಿಕ ಯೋಜನೆಯಲ್ಲಿ ಭೂ ಸ್ವಾದೀನ ವೆಚ್ಚವನ್ನು ಒಳಗೊಂಡಂತೆ ಅನುಮೋದಿಸಬೇಕಾಗಿದೆ.

ಇದೇ ವೇಳೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಭೂಸ್ವಾಧೀನದ 50% ವೆಚ್ಚವನ್ನು ಭರಿಸಲು ಮೌಖಿಕ ವಾಗಿ ಒಪ್ಪಿಗೆ ನೀಡಿರುವ ಬಗ್ಗೆ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು.

ಆದ್ದರಿಂದ ಈ ಯೋಜನೆಯನ್ನು ಶೀಘ್ರವಾಗಿ ಅನುಮೋದಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡಕರಿ ಜೀ ಅವರಿಗೆ ಒತ್ತಾಯಿಸಿದರು.