ಕಲಬುರಗಿ ಉತ್ತರ ವಲಯದ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ

ಕಲಬುರಗಿ,ಫೆ.8-ಕಲಬುರಗಿ ಉತ್ತರ ವಲಯ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮಜಿ ಅವರ ಸಹಯೋಗದಲ್ಲಿ, 4 ಮತ್ತು 5ನೇ ತರಗತಿ ಕನ್ನಡ, ಗಣಿತ, ಇಂಗ್ಲಿಷ್ ಬೋಧನೆ ಮಾಡುವ ಶಿಕ್ಷಕರಿಗೆ, ತಾಲೂಕು ಹಂತದ ಪ್ರಗತಿಪತದತ್ತ ನನ್ನ ಶಾಲಾ ಯೋಜನೆಯಡಿ ತಾಲೂಕು ಹಂತದ ಶೈಕ್ಷಣಿಕ ಸಮ್ಮೇಳನ ಮತ್ತು ಪೆÇೀಸ್ಟರ್ ಪ್ರದರ್ಶನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಅಜೀಮ್ ಪ್ರೇಮಜಿ ಜಿಲ್ಲಾ ಸಂಸ್ಥೆ ಪಟ್ಟಣ ಕ್ರಾಸನಲ್ಕಿ ಕಾರ್ಯಕ್ರಮವು ಅದ್ಬುತವಾಗಿ ನೆರವೇರಿತು.
ಸದರಿ ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚನಾಳ್ ಅವರು ಹಾಗೂ ಕಲಬುರಗಿ ಉತ್ತರ ವಲಯದ ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ಶಾಂತ ಬಾಯಿ ಬಿರಾದಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಗತಿಪತದತ್ತ ನಮ್ಮ ಶಾಲೆ ಕಾರ್ಯಕ್ರಮ ತುಂಬಾ ವಿನೂತನ, ಅದ್ಭುತವಾದ ಕಾರ್ಯಕ್ರಮ ಇದು ಮಕ್ಕಳ ಬುನಾದಿ ಶಿಕ್ಷಣ ಗಟ್ಟಿಗೊಳಿಸುವಲ್ಲಿ ಸಹಾಯಕವಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ವಿಷಯದಲ್ಲಿ ಮಗುವಿನಲ್ಲಿ ಮೂಲಭೂತ ಶಿಕ್ಷಣ ಸರಾಗವಾಗಿ ಓದುವದು, ಬರೆಯುವುದು , ಮತ್ತು ಗಣಿತದ ಅಡಿಪಾಯವಾದ ಮೂಲ ಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದಾಗಿದೆ ಎಂದು ಹೇಳಿದರು.
ಪ್ರಗತಿಪತದತ್ತ ನಮ್ಮ ಶಾಲೆ ಕಾರ್ಯಕ್ರಮದ ತಾಲ್ಲೂಕ ನೋಡಲ್ ಅಧಿಕಾರಿ ರಾಜಶ್ರೀ ಎಂ.ಚಿನ್ನಾಕರ ಹಾಗೂ ಅಜೀಮ್ ಪ್ರೇಮಜಿ ಫೌಂಡೇಶನದ ಜಿಲ್ಲಾ ನೋಡಲ್ ಅಧಿಕಾರಿ ಗ್ಲ್ಯಾಂಡ್ಸನ ಅವರು ಮಾತನಾಡಿ, 2023ರ ನಿಪುಣ ಭಾರತ ಹೇಳುವಂತೆ ಮಗುವಿನ ಪ್ರಾಥಮಿಕ ಶಿಕ್ಷಣವು ಶಾಲಾ ಶಿಕ್ಷಣದಲ್ಲಿ ಅತ್ಯಂತ ನಿರ್ಣಾಯಕವಾದ ಘಟ್ಟವಾಗಿರುವುದರಿಂದ ಈ ಹಂತದಲ್ಲಿ ಮಗುವಿನ ಗ್ರಹಿಕೆ ಸಾಮಥ್ರ್ಯ ಬಹಳ ತ್ವರಿತವಾಗಿರುವುದರಿಂದ ಈ ಹಂತದಲ್ಲಿ ಮಗುವಿಗೆ ಭಯಮುಕ್ತ ವಾತಾವರಣ ಕಲ್ಪಿಸಿ ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ ಹಾಗೂ ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಪಾಠ ಬೋಧನೆ ಮಾಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿ ಕನ್ನಡ , ಇಂಗ್ಲಿಷ್, ಗಣಿತ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಬಿತ್ತಿ ಪತ್ರಗಳು ತಯಾರಿಸುವುದು, ಕಥೆ ಕಟ್ಟುವುದು ಅಭಿನಯ ಗೀತೆ,ನಾಟಕ, ಚಿತ್ರ ಬರೆಯುವುದು ಪದಸಂಪತ್ತು ರಚಿಸುವುದು,ವಾಕ್ಯಗಳ ರಚನೆ ಹೀಗ ಅನೇಕ ಚಟುವಟಿಕೆಗಳು .ಗಣಿತ ವಿಷಯಕ್ಕೆ ಸಂಬಂಧಿಸಿದ ಬಿಡಿ ಹತ್ತರ ಸ್ಥಾನ ಬೆಲೆಗಳು ,ಸಂಕಲನ, ವ್ಯವಕಲನ ಭಾಗಾಕಾರ ,ಗುಣಾಕಾರ ಭಿನ್ನರಾಶಿಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಪ್ರದರ್ಶನಗೊಂಡವು ಸದರಿ ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮಜಿಯ ತಾಲೂಕ ನೋಡಲ್ ಅಧಿಕಾರಿ ತೇಜಸ್ವಿನಿ ಹಾಗೂ ಕಲ್ಬುರ್ಗಿ ಉತ್ತರ ವಲಯದ ಕ್ಷೇತ್ರಸಂಪನ್ಮೂಲವ್ಯಕ್ತಿಗಳಾದ ತನುಜ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹಾಗಾಂವ ಸಿಆರ್‍ಪಿ ರಾಗಿಣಿ , ಕಲ್ಲಹಂಗರಗಾ ಸಿಆರ್‍ಪಿ ಭೀಮಾಶಂಕರ್, ಡೊಂಗರಗಾಂವ ಸಿಆರ್‍ಪಿ ಮಹದೇವ್, ಓಕಳಿ ಸಿಆರ್‍ಪಿ ಉಮೇಶ್, ಔರಾದ್ ಸಿಆರ್‍ಪಿ ಕವಿತಾ ಹಾಗೂ ತಾಲೂಕಿನ ವಿವಿಧ ಶಾಲೆಯ ಮುಖ್ಯ ಗುರುಗಳು ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನದ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.