ಕಲಬುರಗಿ ಆಕಾಶವಾಣಿ 55 ನೇ ಸಂಸ್ಥಾಪನಾದಿನ “ಬಾನುಲಿ ನಡೆ ಕೇಳುಗರ ಕಡೆ” ಮೂಡಿಬಂದ ಸಂವಾದ

ಕಲಬುರಗಿ, ನ.12:ಕಲಬುರಗಿ ಆಕಾಶವಾಣಿ ಕೇಂದ್ರದ 55 ನೇ ಸಂಸ್ಥಾಪನಾದಿನಾಚರಣೆಯನ್ನು ನ.11ರಂದು ಕೇಂದ್ರದಲ್ಲಿ ಕೇಳುಗರ ಜೊತೆ ಆತ್ಮೀಯ ಸಂವಾದದ “ಬಾನುಲಿ ನಡೆ ಕೇಳುಗರ ಕಡೆ” ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.
ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಜಿ. ಗುರುಮೂರ್ತಿ ನೇರಪ್ರಸಾರದ ‘ಕಲಬುರಗಿ ಆಕಾಶವಾಣಿ 55 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೇಂದ್ರವು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಜನರ ಮನಗೆದ್ದಿದೆ ಮುಂದೆ ಕೂಡಾ ನಿಮ್ಮ ಸಹಕಾರ ಸದಾ ಇರಲಿ ಎಂದು ಕೇಳುಗರಿಗೆ ಕರೆ ನೀಡಿದರು. ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಜನಮನ ರಂಜಿಸುವ ಆಕಾಶವಾಣಿ ಕೇಳುಗರಿಗೆ ಸ್ಪಂದಿಸುತ್ತಿದೆ. ದರ್ಪಣ, ಜೊತೆ ಜೊತೆಯಲಿ ನೇರಫೋನ್ ಇನ್ ಕಾರ್ಯಕ್ರಮ, ಶೀಘ್ರದಲ್ಲೇ ರಸಪ್ರಶ್ನೆ ಕಾರ್ಯಕ್ರಮ, ಅಭಿಲಾಷಾ, ಸ್ವಾತಂತ್ರ್ಯದ ಅಮೃತಮಹೋತ್ಸವದ ವಿಶೇಷ ನೇರಪ್ರಸಾರದ ಸರಣಿ ಮೂಲಕ ಕೇಳುಗರನ್ನು ಮುಟ್ಟುವುದಾಗಿ ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್‍ಕುಮಾರ್ ಎಚ್.ಎನ್ ಕೇಳುಗರನ್ನುದ್ದೇಶಿಸಿ ಹೇಳಿದರು.
‘ಬಾನುಲಿನಡೆ ಕೇಳುಗರ ಕಡೆ’ ಸಂವಾದವನ್ನು ಡಾ. ಸದಾನಂದ ಪೆರ್ಲ, ಶಾರದಾ ಜಂಬಲದಿನ್ನಿ ಮತ್ತು ಸಂಗಮೇಶ್ ನಡೆಸಿ ಕೊಟ್ಟರು. ಸಂವಾದದಲ್ಲಿ ಪಾಲ್ಗೂಂಡ ಕೇಳುಗರಲ್ಲಿ ಪ್ರದೀಪ ಬಾಲ್ಕಿ ಮಾತನಾಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ಕಲಬುರಗಿ ಆಕಾಶವಾಣಿ ಹೆಮ್ಮೆಯ ಕೇಂದ್ರ ಎಂದರು. ಜೇವರ್ಗಿಯ ಸಾಜನ್ ಪಟೇಲ ಮಾತನಾಡಿ ಹಲೋ ಅಭಿಲಾಷಾ, ಉದ್ಯೋಗ ಮಾಹಿತಿ ಯಂಗ್ ವಾಣಿ ಮೂಡಿ ಬರಲಿ ಎಂದರು. ಕಲಬುರಗಿ ಬಸವನಗರದ ಶರಣಬಸವಪ್ಪ ಕಟ್ಟಿಮನಿ ಮಾತನಾಡಿ ಹಿಂದಿ ಮಾತ್ರ ಇರಲಿ ಇಂಗ್ಲೀಷ್ ಸುದ್ದಿ ಸಂಚಿಕೆ ಬೇಡ ಎಂದರು. ಯಾದಗಿರಿ ಜಿಲ್ಲೆಯ ಸುರಪುರದ ರಾಘವೇಂದ್ರ ಭಕ್ರ ಅವರು ನಿಲಯದ ಎಲ್ಲ ಕಾರ್ಯಕ್ರಮ ಅಚ್ಚುಮೆಚ್ಚಿನದ್ಸದು. ಬಾನುಲಿ ಜೀವನಕ್ಕೆ ಶಿಕ್ಷಣ ಮಾಹಿತಿ ನೀಡುತ್ತಿದೆ ಎಂದರು ಬೆಂಗಳೂರಿನ ಹನುಮಂತ ಪೂಜಾರಿ 27 ವರ್ಷಗಳಿಂದ ಕಲಬುರಗಿ ಕೇಳುಗನಾಗಿ ತುಂಬಾ ಪ್ರಬಾವಿತನಾಗಿರುವೆ. ಪೋಲೀಸ ಪರೀಕ್ಷೆ ಪಾಸಾಗಲು ಕೇಂದ್ರದ ಕಾರಣ ಎಂದರು ಕಡಗಂಚಿಯ ಧರ್ಮಣ್ಣ ಧನ್ನಿ ಬಾನುಲಿ ಜೀವನದ ಅವಿಭಾಜ್ಯ ಅಂಗ ಬದುಕು ರೂಪಿಸಲು ಪ್ರೇರಣೆ ನೀಡಿದೆ. ಕವಿಯಾಗಲು ಉತ್ತೇಜಿಸಿದೆ ಎಂದರು. ಮಂಠಾಳದ ಬಸವರಾಜ ಮಾತನಾಡಿ ಚಿಂತನ ಸ್ಥಳಿಯವಾಗಿ ಹೆಚ್ಚು ಮೂಡಿಬರಲಿ ಎಂದರು. ಶ್ರೀನಿವಾಸ ಸರಡಗಿಯ ಸಂಗನಗೌಡ ಅವರು ಬಾನುಲಿ ಮಾಹಿತಿ ಕಣಜ ಹಾಗೂ ರೈತರ ಮಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಧು ದೇಶಮುಖ್ ಮತ್ತು ಮೇಘಾ ಪಾಟೀಲ್, ಅಬ್ದುಲ್ ರವೂಫ್ ನೆರವಾದರು ನಂತರ ನಡೆದ ಸರಳ ಸಂಸ್ಥಾಪನಾ ದಿನ ಆಚರಣೆ ಸಂದರ್ಭದಲ್ಲಿ ಸಿಹಿತಿಂಡಿ ಹಂಚಲಾಯಿತು.
ಅಶೋಕ್ ಕುಮಾರ ಸೋಂಕಾವಡೆ, ಸಯ್ಯದ್ ಅಸ್ತಾರ್, ಸುರೇಶ್ ಜಿ.ವಿ. ಕುಲಕರ್ಣಿ, ಈಶ್ವರ್, ಟಿ.ಡಿ.ಕುಲಕರ್ಣಿ ಬಾಳಪ್ಪ, ಶ್ರೀಮಂತ ನಾಲವಾರ, ನಾಮದೇವ್, ಅವಿನಾಶ್, ಮತ್ತಿತರಿದ್ದರು.