ಕಲಬುರಗಿಯಿಂದ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಜೂ. 06 ರಂದು ದಿಂಡಿ ಪಲ್ಲಕ್ಕಿ ಪಾದಯಾತ್ರೆ ಪ್ರಾರಂಭ

ಕಲಬುರಗಿ:ಜೂ.4:ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 44 ನೇ ಪುಣ್ಯ ಸ್ಮರಣೋತ್ಸವದ ಆಧ್ಯಾತ್ಮ ಸಪ್ತಾಹವು ಶನಿವಾರ ದಿನಾಂಕ 15 ಜೂನ 2024 ರಂದು ಶ್ರೀಮಠದ ಸದ್ಗುರುಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಗದ್ದುಗೆಗಳ. ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ಸೋಮವಾರ ದಿನಾಂಕ 17 ಜೂನ 2024 ರಂದು ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಳ್ಳುವದು .ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ. ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭುಜೀರವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ರವಿವಾರ ದಿನಾಂಕ 16 ಜೂನ 2024 ರಂದು ಬೆಳಿಗ್ಗೆ 8=00 ಗಂಟೆಗೆ ಇಂಚಗೇರಿ ಗ್ರಾಮದಿಂದ ಶ್ರೀ ಕ್ಷೇತ್ರ ಇಂಚಗೇರಿಮಠದವರೆಗೆ ಕಳಸದ ಭವ್ಯ ಮೆರವಣಿಗೆಯು ವಿವಿಧ ಜನಪದ ಕಲಾಮೇಳಗಳೊಂದಿಗೆ ಶ್ರೀಮಠ ತಲುಪಿದ ನಂತರ ಕಳಸಾರೋಹಣ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಜರಗುವದು. ಶ್ರೀ ಸಮರ್ಥ ಸದ್ಗುರು ಗುರುಪುತ್ರೇಶ್ವರ ಮಹಾರಾಜರ ಹಾಗೂ ಶ್ರೀ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಆದೇಶದ ಮೇರೆಗೆ ಈ ಆಧ್ಯಾತ್ಮ ಸಪ್ತಾಹದಲ್ಲಿ ಭಾಗವಹಿಸಲು ಪ್ರತಿ ವರ್ಷದಂತೆ ಕಲಬುರಗಿಯ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರ ಆಶ್ರಮದಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ಗುರುವಾರ 06 ಜೂನ 2024 ರಂದು ಹೊರಡುವದು. ಗುರುವಾರ ದಿನಾಂಕ 06 ಜೂನ 2024 ರಂದು ಹೊರಟ ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ಶುಕ್ರವಾರ ದಿನಾಂಕ 14 ಜೂನ 2024 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ತಲುಪಿ ಆಧ್ಯಾತ್ಮ ಸಪ್ತಾಹದಲ್ಲಿ ಭಾಗವಹಿಸಿ ಸೋಮವಾರ 17 ಜೂನ 2024 ರಂದು ಶ್ರೀಕ್ಷೇತ್ರ ಇಂಚಗೇರಿ ಮಠದಿಂದ ಮರಳಿ ಹೊರಟು ಶನಿವಾರ ದಿನಾಂಕ 22 ಜೂನ 2024 ರಂದು ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ಕಲಬುರಗಿ ಮಹಾನಗರಕ್ಕೆ ತಲುಪುವದು. ಪಾದಯಾತ್ರೆ ಹಾಗೂ ಸಪ್ತಾಹ ಕಾರ್ಯಕ್ರಮಗಳಲ್ಲಿ ಇಂಚಗೇರಿ ಸಂಪ್ರದಾಯದ ಸದ್ಗುರುಗಳ ಸಂದೇಶವಾದ ಸರ್ವಧರ್ಮ ಸಮನ್ವಯ.ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌರ್ಹದತೆ.ಸರ್ವೋದಯ. ವಿಶ್ವಶಾಂತಿ ಮುಂತಾದ ಮಹಾನ ವಿಚಾರಗಳನ್ನು ಊರೂರಿಗೆ ತಿಳಿಸುವದೆ ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ ಈ ಪಾದಯಾತ್ರೆಯಲ್ಲಿ ಇಂಚಗೇರಿ ಸಾಂಪ್ರದಾಯದ ನಿಯಮದಂತೆ ನಿತ್ಯನೇಮ ಉಪಾಸನೆ.ಭಜನೆ.ಪುರಾಣ ಪ್ರವಚನ. ಹೀಗೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಜರಗುವವು .ವಿವಿಧ ಮಠಗಳ ಪೂಜ್ಯ ಮಠಾಧೀಶರು.ಸಾಹಿತಿಗಳು.ರಾಜಕೀಯ ನಾಯಕರು ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಈ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಭಾರತೇಶ ಹಾಸಿಲಕರ ಮನವಿ ಮಾಡಿದ್ದಾರೆ.