ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ಆಗ್ರಹ

ಕಲಬುರಗಿ,ಸೆ.15-ಕಲ್ಯಾಣದ ಅಮೃತ ಮಹೋತ್ಸವದ ನಿಮಿತ್ಯ ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ಮತ್ತು ಸಂಪುಟ ಸಭೆಗಳು ನಡೆಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ 75ನೇ ಅಮೃತ ಮಹೋತ್ಸವದ ನಿಮಿತ್ಯ ಮತ್ತು ಸಂವಿಧಾನದ 371ನೇ (ಜೆ) ಕಲಂ ಜಾರಿಯಾಗಿ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕಾಲಮಿತಿಯ ಅಭಿವೃದ್ಧಿಗೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರಸ್ತುತ ಅಮೃತ ಮಹೋತ್ಸವದ ಸಾಲಿನಲ್ಲಿ ಕನಿಷ್ಠ ಒಂದು ವಾರದ ವಿಧಾನ ಮಂಡಲ ಅಧಿವೇಶನ ನಡೆಸಬೇಕು ಎಂದು ಅವರು ಆಗ್ರಹಿಸಿದರು.
Àಸುದ್ದಿಗೋಷ್ಠಿಯಲ್ಲಿ ಹಿರಿಯ ಚಿಂತಕರಾದ ಪೆÇ.ಆರ್.ಕೆ.ಹುಡಗಿ, ಪೆÇ.ಬಸವರಾಜ ಕುಮ್ನೂರ್, ಸಮಿತಿಯ ಮುಖಂಡರಾದ ಮನೀಷ ಜಾಜು, ಡಾ.ಮಾಜಿದ ದಾಗಿ, ಲಿಂಗರಾಜ ಸಿರಗಾಪೂರ, ಜ್ಞಾನಮಿತ್ರ ಸಾಮವೆಲ್, ಅಬ್ದುಲ್ ರಹೀಂ,ಅಸ್ಲಂ ಚೌಂಗೆ ಉಪಸ್ಥಿತರಿದ್ದರು.