ಕಲಬುರಗಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸಲು ಆಗ್ರಹಿಸಿದ ಸಂಸದ ಡಾ ಉಮೇಶ್ ಜಾಧವ್

ಕಲಬುರಗಿ,ಜು.25: ಲೋಕಸಭೆಯಲ್ಲಿ ಕಲಬುರಗಿ ಸಂಸದರಾದ ಡಾ. ಉಮೇಶ್ ಜಾಧವ್ ರವರು ನಿಯಮ 377ರ ಅಡಿ ಕಲ್ಬುರ್ಗಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸಲು ಆಗ್ರಹಿಸಿದರು.

ಅವರ ಬೇಡಿಕೆ ಅಂಶಗಳು ಹೀಗಿದೆ ಕಲಬುರಗಿ ಕಲ್ಯಾಣ ಕರ್ನಾಟಕದ ವಿಭಾಗಿಯ ಕೇಂದ್ರವಾಗಿದ್ದು ಇದು ಶೈಕ್ಷಣಿಕ ಕೇಂದ್ರವೂ ಕೂಡ ಆಗಿದೆ. ಪಕ್ಕದ ಜಿಲ್ಲೆಗಳಾದ ಯಾದಗಿರಿ ಮತ್ತು ಬೀದರ್ ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ಕಲಬುರಗಿಯನ್ನು ತಮ್ಮ ಕೇಂದ್ರವಾಗಿ ಆರಿಸಿಕೊಳ್ಳುತ್ತಾರೆ. ಕಲ್ಬುರ್ಗಿಯಲ್ಲಿ ಎರಡು ವಿಶ್ವವಿದ್ಯಾಲಯ ಜೊತೆಗೆ ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದ ನೆಲೆಯಾಗಿದೆ. ಕಲಬುರಗಿಯಲ್ಲಿ ಮೂರು ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ವೈದ್ಯಕೀಯ ಕಾಲೇಜು, ಇಎಸ್‌ಐಸಿ ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜು, ಚಿತ್ರಕಲಾ ಕಾಲೇಜು, ಹಲವಾರು ಫಾರ್ಮಸಿ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿವೆ ಆದರೂ ಕೂಡ ಮೇಲಿನ ಎಲ್ಲಾ ಸಂಸ್ಥೆಗಳು ಕ್ರೀಡಾ ಸಂಕುಲದ ಕೇಂದ್ರದ ಕೊರತೆಯನ್ನು ಹೊಂದಿದ್ದು, ಕಲಬುರಗಿಯಲ್ಲಿ ಕ್ರೀಡಾ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳೊಂದಿಗ ಉತ್ತಮ ಕ್ರೀಡಾ ಕಾಲೇಜಿಗೆ ಹೆಚ್ಚಿನ ಬೇಡಿಕೆಯಿದೆ.

ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಕಲಬುರಗಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಕಾಲೇಜು ಸ್ಥಾಪಿಸಲು ಕೋರಲಾಗಿದೆ ಹಾಗೆಯೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ 300 ಹಾಸಿಗೆಗಳ ವಸತಿ ನಿಲಯ ನಿರ್ಮಾಣದ ಅವಶ್ಯಕತೆಯಿದೆ ಎಂದು ಹೇಳಿದರು.

ಖೇಲೋ ಇಂಡಿಯಾಗೆ ಸಂಬಂಧಿಸಿದ ಕೆಲವು ಬೇಡಿಕೆಗಳನ್ನು ಇದರೊಂದಿಗೆ ಸದನದಲ್ಲಿ ಪ್ರಸ್ಥಾಪಿಸಿದರು

  1. ಈ ಪ್ರದೇಶದಲ್ಲಿ ಹಾಕಿಯನ್ನು ಉತ್ತೇಜಿಸಲು ಅಂತರಾಷ್ಟ್ರೀಯ ಗುಣಮಟ್ಟದ ಹಾಕಿ ಟರ್ಫ್ ಕೋರ್ಟ್‌ನ ನಿರ್ಮಾಣ
  2. ಕಬ್ಬಡಿ, ಖೋ ಖೋ, ವಾಲಿಬಾಲ್, ಥ್ರೋಬಾಲ್, ಬ್ಯಾಸ್ಕೆಟ್‌ಬಾಲ್‌ನಂತಹ ಆಟವನ್ನು ಆಯೋಜಿಸಲು ಅಂತರಾಷ್ಟ್ರೀಯ ಗುಣಮಟ್ಟದ ವಿವಿಧೋದ್ದೇಶ ಒಳಾಂಗಣ ಆಟಗಳ ಸಭಾಂಗಣವನ್ನು ನಿರ್ಮಿಸುವುದು.