ಕಲಬುರಗಿಯಲ್ಲಿ ಯೋಗಥಾನ್ 2022 ಆಯೋಜನೆ; ಸಾವಿರಾರು ಮಕ್ಕಳಿಂದ ಯೋಗ ಪ್ರದರ್ಶನ:ಸದೃಡ ಆರೋಗ್ಯ ಹೊಂದಲು ಪ್ರತಿನಿತ್ಯ ಯೋಗ ಮಾಡಬೇಕು

ಕಲಬುರಗಿ,ಜ.15:ಯೋಗ ಅಭ್ಯಾಸ ಇಂದಿನ ಸಮಾಜಕ್ಕೆ ತೀರಾ ಅವಶ್ಯಕವಾಗಿದ್ದು ಪ್ರತಿನಿತ್ಯ ಯೋಗ ಮಾಡುವುದರಿಂದ ಸದೃಡ ಆರೋಗ್ಯ ಹೊಂದಬಹುದು ಮತ್ತು ಸದೃಡ ಸಮಾಜ ನಿರ್ಮಾಣ ಸಾದ್ಯವಾಗಲಿದೆ ಎಂದು ದಕ್ಷಿಣ ಮತ ಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಕಲಬುರಗಿಯ ಪೆÇಲೀಸ್ ಪರೇಡ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಇಲಾಖೆ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಮಹಾನಗರ ಪಾಲಿಕೆ, ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ಜಿಲ್ಲಾ ಮಟ್ಟದ ಯೋಗ ಸಂಸ್ಥೆಗಳ ವತಿಯಿಂದ ಯೋಗಥಾನ್ 2022 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾನ್ಯ ಪ್ರಧಾನ ಮಂತ್ರಿಗಳು ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಇಡಿ ವಿಶ್ವದಲ್ಲಿ 100ಕ್ಕೂ ಹೆಚ್ಚು ದೇಶಗಳು ಇಂದು ಯೋಗವನ್ನು ಅಳವಡಿಸಿಕೊಂಡಿವೆ. ದೇಶದಲ್ಲಿ 60 ಪ್ರತಿಶತ ಯುವಕರಿದ್ದು ಅವರಿಗೆ ಯೋಗ ತೀರಾ ಅವಶ್ಯಕವಾಗಿದೆ ಯೋಗ ಮಾಡುವುದರಿಂದ ರೋಗವನ್ನು ತಡೆಯಬಹುದಾಗಿದೆ ಪ್ರತಿಯೊಬ್ಬರು ಯೋಗ ಮಾಡಿ ರೋಗ ಮುಕ್ತ ಜೀವನ ಪಡೆಯಬೇಕು ಒತ್ತಡ ಜೀವನದೊಂದಿಗೆ ಒಂದಿಷ್ಟು ಸಮಯ ಯೋಗಕ್ಕಾಗಿ ಮಿಸಲಾಗಿಡಬೇಕು ಉತ್ತಮವಾದ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡ ಮಾತನಾಡಿ, ವಿಧಾನ ಪರಿಷತ್ ಶಾಸಕ ಶಶೀಲ ಜಿ ನಮೋಶಿ ಮಾತನಾಡಿ, ಇಂದು ದೇಶದಲ್ಲಿ ಯೋಗ ದಿನಾಚರಣೆ ಮಾಡಲಾಗುತ್ತದೆ ನಾವೆಲ್ಲಾ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಯಶ್ವಂತ ವಿ ಗುರುಕರ್ ಮಾತನಾಡಿ,ಯೋಗವು ನಮಗೆ ಸದೃಡ ಆರೋಗ್ಯವನ್ನು ತಂದು ಕೊಡುತ್ತದೆ ಉತ್ತಮ ಆರೋಗ್ಯ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು ಅದ್ಕಕಾಗಿ ನಾವು ಪ್ರತಿನಿತ್ಯ ಯೋಗ ಮಾಡಬೇಕು ಎಂದು ಹೇಳಿದರು.
ಬೆಳಗಿನ ಜಾವ ಐದು ಗಂಟೆಯಿಂದಲೇ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಮಧ್ಯ ವಯಸ್ಕರು, ವೃದ್ಧರು ಪರೇಡ್ ಮೈದಾನದತ್ತ ತಂಡೋಪತಂಡವಾಗಿ ಬಂದರು. ಚಳಿಯ ವಾತಾವರಣದ ನಡುವೆಯೂ ವಿಶಾಲ ಆವರಣದಲ್ಲಿ ಉತ್ತರಾಭಿಮುಖವಾಗಿ ಕುಳಿತು ಹರ್ಷದಿಂದ ಯೋಗಾಭ್ಯಾಸ ಮಾಡಿದರು.
ವೇದಿಕೆ ಮೇಲೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ,ಪೆÇೀಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿ ಶ್ರೀನಿವಾಸ ಅಡ್ಡೂರು, ಎಸಿಪಿ. ದೀಪನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ದಿ. ಬದೋಲೆ, ಮಹಾನಗರ ಪಾಲಿಕೆ ,ಆಯುಕ್ತರಾದ ಪಾಟೀಲ್ ಭೂವನೇಶ ದೇವಿದಾಸ, ಯೋಗ ಮತ್ತು ಪ್ರಕೃತಿ ಆಯುμï ಇಲಾಖೆ ಉಪನಿರ್ದೇಶಕ ಎಮ್.ಎ.ದಾಸರ್. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಮಕ್ಕಳಿಗೆ ಟಿ ಶರ್ಟಗಳನ್ನು ಉಚಿತವಾಗಿ ವಿತರಿಸಿದರು.ಶಾಲಾ ಕಾಲೇಜಿನ ಮಕ್ಕಳು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದರು, ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಶಾಲಾ ಕಾಲೇಜಿನ ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.